More

    ರಿಸರ್ವ್ ಫಾರೆಸ್ಟ್‌ನೊಳಗೆ ಬೇಟೆ ಯತ್ನ, ಮೂವರ ಬಂಧನ ಬಂದೂಕು, ಕಾರು ವಶ

    ವಿಜಯವಾಣಿ ಸುದ್ದಿಜಾಲ ಕೊಕ್ಕಡ

    ಪ್ರಾಣಿಗಳನ್ನು ಬೇಟೆಯಾಡಲು ಯತ್ನಿಸುತ್ತಿದ್ದ ಮೂವರನ್ನು ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಶಿಬಾಜೆಯಲ್ಲಿ ಬಂಧಿಸಿದ್ದಾರೆ.
    ಶಿಬಾಜೆ ಗ್ರಾಮದ ಪೆರ್ಲ-ಕಲ್ಲಾಜೆ ರಸ್ತೆಯ ಪತ್ತಿಮಾರ್ ಎಂಬಲ್ಲಿ ಶಿರಾಡಿ-ಶಿಶಿಲ ಮೀಸಲು ಅರಣ್ಯ-4ರಲ್ಲಿ ಮೇ 23ರ ಬೆಳಗ್ಗಿನ ಜಾವ ಎರಡು ಗಂಟೆ ವೇಳೆಗೆ ಕಾಡು ಪ್ರಾಣಿ ಬೇಟೆಯಾಡಲು ಯತ್ನಿಸುತ್ತಿದ್ದ ಶಿಬಾಜೆಯ ಕುರುಂಬು ನಿವಾಸಿ ಹರೀಶ್(44), ಸಕಲೇಶಪುರದ ಕೌಡಳ್ಳಿಯ ಶಿವಕುಮಾರ್(33), ಶಿಬಾಜೆಯ ಪತ್ತಿಮಾರ್‌ನ ಪದ್ಮನಾಭ(53) ಬಂಧಿತರು. ಬಂಧಿತರಿಂದ 1-ಎಸ್‌ಬಿಬಿಎಲ್ ಕೋವಿ ಮತ್ತು ಒಂದು ಮಾರುತಿ ಆಮ್ನಿ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

    ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ನೇತೃತ್ವದಲ್ಲಿ, ಉಪ ವಲಯ ಅರಣ್ಯಾಧಿಕಾರಿ ರಾಜೇಶ್, ಅವಿನಾಶ್, ಶಿವಕುಮಾರ್ ಹೊಸ್ಮನಿ, ರವೀಂದ್ರ, ಬೀಟ್ ಫಾರೆಸ್ಟ್ ನಿಂಗಪ್ಪ ಅವರಿ, ಚಾಲಕ ಕಿಶೋರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts