More

    ಮಗುವಿನ ಕತ್ತಿನಿಂದ ಚಿನ್ನದ ಸರ ಎಗರಿಸಿದ ಯುವತಿಗೆ ಜೈಲು

    ಕಾಸರಗೋಡು: ಆಸ್ಪತ್ರೆಯ ಸರತಿಸಾಲಲ್ಲಿ ನಿಂತಿದ್ದ ಮಹಿಳೆ ಬಗಲಲ್ಲಿದ್ದ ಮಗುವಿನ ಕತ್ತಿನಿಂದ ಚಿನ್ನದ ಸರ ಎಗರಿಸಿದ್ದ ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಹೊಸೂರು ನಿವಾಸಿ ದಿವ್ಯಾ ಎಂಬಾಕೆಗೆ ಕಾಸರಗೋಡು ಚೀಫ್ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು ಆರು ತಿಂಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.


    2017ರಂದು ಚೆರ್ಕಳ ಐದನೇ ಮೈಲಿಗಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರನ್ನು ಕಾಣಲು ಸರತಿಸಾಲಲ್ಲಿ ನಿಂತಿದ್ದ ಮಹಿಳೆ ಎತ್ತಿಕೊಂಡಿದ್ದ ಒಂದು ವರ್ಷ ಪ್ರಾಯದ ಮಗುವಿನ ಕತ್ತಿನಿಂದ ಚಿನ್ನದ ಸರ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ದಿವ್ಯಾ ಸೇರಿದಂತೆ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಎರಡನೇ ಆರೋಪಿ ಮಹಿಳೆ ಜಾಮೀನಿನಲ್ಲಿ ಬಿಡುಗಡೆಗೊಂಡ ನಂತರ ತಲೆಮರೆಸಿಕೊಂಡಿದ್ದು, ಈಕೆಯ ಪ್ರಕರಣವನ್ನು ನ್ಯಾಯಾಲಯ ಪ್ರತ್ಯೇಕವಾಗಿ ವಿಚಾರಣೆಗಾಗಿ ಮುಂದೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts