

ಪಡುಬಿದ್ರಿ: ಸೈಬರ್ ವಂಚಕರು ಭಾಸ್ಕರ್ ಎಂಬುವರ ವಾಟ್ಸಾೃಪ್ಗೆ ನಕಲಿ ಲಿಂಕ್ ಕಳುಹಿಸಿ ಬ್ಯಾಂಕ್ ಖಾತೆಯಿಂದ 82,200 ರೂ. ಹಣ ವಂಚನೆ ಮಾಡಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾಸ್ಕರ್ ಬುಧವಾರ ತಮ್ಮ ಮೊಬೈಲ್ಗೆ ಕೆನರಾ ಬ್ಯಾಂಕ್ ಹೆಸರಲ್ಲಿ ಬಂದ ಲಿಂಕನ್ನು ಕ್ಲಿಕ್ ಮಾಡಿದಾಗ ಅವರ ಕೆನರಾ ಬ್ಯಾಂಕ್ನ 5 ಖಾತೆಗಳಿಂದ 82,200 ರೂ. ಹಣ ಕಡಿತವಾದ ಬಗ್ಗೆ ಮೇಸೆಜ್ ಬಂದಿತ್ತು. ತಕ್ಷಣ ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ಖಾತೆಯಲ್ಲಿನ ಹಣ ಕಡಿತವಾದ ಬಗ್ಗೆ ದೃಢಪಟ್ಟಿದೆ ಎಂದು ಪೊಲೀಸರು ವಿವರಿಸಿದ್ದಾರೆ.