More

    ಶಿಕ್ಷಕ, ಪದವೀಧರರಿಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಕೊಡುಗೆ ತುಲನೆ ಅಗತ್ಯ

    ಮಂಗಳೂರು: ರಾಜ್ಯದಲ್ಲಿ ಶಿಕ್ಷಕರು ಹಾಗೂ ಪದವೀಧರರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ನೀಡಿರುವ ಕೊಡುಗೆಯನ್ನು ತುಲನೆ ಮಾಡಿ ಎಂದು ಕೆಪಿಸಿಸಿ ಶಿಕ್ಷಕರ ವಿಭಾಗದ ಅಧ್ಯಕ್ಷ ಡಾ.ಕುಬೇರಪ್ಪ ಹೇಳಿದ್ದಾರೆ.

    ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ದೇವರಾಜ ಅರಸು ಕಾಲದಿಂದ ಶಿಕ್ಷಕರು, ಪದವೀಧರರಿಗಾಗಿ ನೂರಾರು ಕೆಲಸಗಳು, ಕಲ್ಯಾಣ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರಗಳು ಮಾಡಿವೆ. ಈಗ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರು ಅದರ ಋಣ ತೀರಿಸುವ ಕೆಲಸ ಮಾಡಲಿದ್ದಾರೆ ಎಂದರು.

    ಸಿದ್ದರಾಮಯ್ಯ ಅವರು ಹಿಂದಿನ ಬಾರಿ ಸಿಎಂ ಆಗಿದ್ದಾಗ 6ನೇ ವೇತನ ಆಯೋಗದ ಶಿಫಾರಸನ್ನು ಯಥಾವತ್ ಜಾರಿ ಮಾಡಿದ್ದರಿಂದ ಸಹಸ್ರಾರು ಶಿಕ್ಷಕರು, ಪದವೀಧರರಿಗೆ ಮಾಸಿಕ 10ರಿಂದ 25 ಸಾವಿರ ರು. ಹೆಚ್ಚುವರಿ ಲಾಭ ಸಿಕ್ಕಿತ್ತು. ಇದು ಕಾಂಗ್ರೆಸ್ ಸರ್ಕಾರ ನೀಡಿದ ದೊಡ್ಡ ಕೊಡುಗೆ. ಈಗ 7ನೇ ವೇತನ ಆಯೋಗವು ಮಧ್ಯಂತರ ವರದಿ ನೀಡಿದೆ. ಚುನಾವಣೆ ಮುಗಿದ ನಂತರ ಅದನ್ನೂ ಯಥಾವತ್ ಜಾರಿ ಮಾಡುವ ಇಂಗಿತವನ್ನು ಸಿಎಂ ವ್ಯಕ್ತಪಡಿಸಿದ್ದಾರೆ. ಇದರಿಂದ ಮತ್ತೊಮ್ಮೆ ದೊಡ್ಡ ಲಾಭ ಸಿಗಲಿದೆ ಎಂದು ಡಾ.ಕುಬೇರಪ್ಪ ತಿಳಿಸಿದರು.

    ಅನುದಾನಿತ ಪ.ಪೂ ಕಾಲೇಜುಗಳಲ್ಲಿ 2015ರವರೆಗಿನ ಎಲ್ಲ ಹುದ್ದೆ ಭರ್ತಿಗೆ ಆದೇಶ ನೀಡಿದ್ದು ಕಾಂಗ್ರೆಸ್ ಸರ್ಕಾರ. ಮಾತ್ರವಲ್ಲದೆ, ವಯೋಮಿತಿ ಕೂಡ ಹೆಚ್ಚಿಸಲಾಗಿತ್ತು. ಹಲವು ಸಾವಿರ ಮಂದಿಗೆ ಇದರಿಂದ ಉದ್ಯೋಗ ದೊರೆತಿದೆ. ಇದೀಗ ಗ್ಯಾರಂಟಿ ಯೋಜನೆ ಮೂಲಕ ನಿರುದ್ಯೋಗಿ ಪದವೀಧರರಿಗೆ ಗೌರವದ ಸ್ಥಾನ ನೀಡಿದೆ. ಆದರೆ ಬಿಜೆಪಿ ಸರ್ಕಾರ ಯಾವ ಕೊಡುಗೆ ನೀಡಿದೆ ಹೇಳಲಿ ಎಂದು ಸವಾಲು ಹಾಕಿದರು.

    ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಅಭದ್ರತೆ ಇತ್ತು. ಅವರನ್ನು ಮುಂದಿನ ವರ್ಷವೂ ಮುಂದುವರಿಸುವ ಆದೇಶ ಆಗಿದೆ. ಮಾತ್ರವಲ್ಲ, 18 ಸಾವಿರ ರು. ಇದ್ದ ವೇತನ 30-40 ಸಾವಿರ ರು.ಗೆ ಏರಿಕೆಯಾಗದೆ. ಪ್ರತಿವರ್ಷ ವೇತನ ಹೆಚ್ಚಳ, ಹೆರಿಗೆ ರಜೆ, ಆರೋಗ್ಯವಿಮೆ, ಕೆಲಸ ಬಿಡುವಾಗ 5 ಲಕ್ಷ ರು. ಇಡುಗಂಟು ನೀಡುವ ಆದೇಶ ಆದೇಶ ಆಗಿದೆ. ಅನುದಾನ ರಹಿತ ಶಾಲೆ ಕಾಲೇಜುಗಳನ್ನು ಹಂತ ಹಂತವಾಗಿ ಅನುದಾನಕ್ಕೆ ಒಳಪಡಿಸಲು ಚಿಂತನೆ ನಡೆಸಲಾಗಿದೆ ಎಂದು ಡಾ.ಕುಬೇರಪ್ಪ ಹೇಳಿದರು.

    ಕಾಂಗ್ರೆಸ್ ಮುಖಂಡರಾದ ನೀರಜ್‌ಪಾಲ್, ಶುಭೋದಯ ಆಳ್ವ, ಹಾವೇರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಂಕರ್, ಅಲಿಸ್ಟರ್ ಡಿಕುನ್ಹ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts