

ಬೆಳ್ತಂಗಡಿ: ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾಡಿ ಗ್ರಾಮದ ಮಾಲ್ದಂಡ ಪರಿಸರದಲ್ಲಿ ಚಿರತೆ ಕಂಡು ಬಂದಿದೆ.
ಇಲ್ಲಿನ ಸಂಜೀವ ಗೌಡ ಎಂಬುವರ ಮನೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಡಿ.7ರ ಮಧ್ಯರಾತ್ರಿ ಚಿರತೆ ಮನೆಯಂಗಳದಲ್ಲಿ ಓಡಾಡಿದ ದೃಶ್ಯ ಸೆರೆಯಾಗಿದೆ.
ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಸಾಕುನಾಯಿಗಳು ಕಾಣೆಯಾಗುತ್ತಿದ್ದವು. ಇದೀಗ ಇಲ್ಲಿ ಚಿರತೆ ಓಡಾಡುವುದು ಸ್ಪಷ್ಟಗೊಂಡಿದೆ. ಇದು ಪರಿಸರದ ಜನರ ಆತಂಕ ಹೆಚ್ಚಲು ಕಾರಣವಾಗಿದೆ.