ನಾಯಕತ್ವ ಗುಣಗಳಿಂದ ಗುರಿ ತಲುಪಲು ಸಾಧ್ಯ

Mul_achieve
Published on

ಮೂಲ್ಕಿ: ಮೌಲ್ಯಾಧಾರಿತ ಶಿಕ್ಷಣ, ನಾಯಕತ್ವ ಗುಣಗಳಿಂದ ಜೀವನದಲ್ಲಿ ಉನ್ನತ ಗುರಿ ತಲುಪಲು ಸಾಧ್ಯ ಎಂದು ಶಾಲೆ ಹಳೇ ವಿದ್ಯಾರ್ಥಿನಿ ಮೂಲ್ಕಿ ನಗರ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀ ಹೇಳಿದರು.

ಕಾರ್ನಾಡು ಸಿಎಸ್‌ಐ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಜರುಗಿದ ವಾರ್ಷಿಕ ಕ್ರೀಡೋತ್ಸವದಲ್ಲಿ ಅವರು ಮಾತನಾಡಿದರು.

ಮುಲ್ಕಿ ನಗರ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ.ಎಂ. ಮಾತನಾಡಿ, ಬೌದ್ಧಿಕ, ದೈಹಿಕ ಆರೋಗ್ಯ ಪರಿಪೂರ್ಣತೆ ಇದ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯ. ಕ್ರೀಡೆ ಹಾಗೂ ಶಿಕ್ಷಣದ ಸಮಭಾವ ಬಹಳ ಅಗತ್ಯ ಎಂದರು.

ಸಿಎಸ್‌ಐ ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಟೀವನ್ ಸರ್ವೋತ್ತಮ ಅಧ್ಯಕ್ಷತೆ ವಹಿಸಿ ಕ್ರೀಡಾ ಧ್ವಜಾರೋಹಣಗೈದು, ಪಥ ಸಂಚಲನದ ಗೌರವರಕ್ಷೆ ಸ್ವೀಕರಿಸಿದರು.

ದೈಹಿಕ ಶಿಕ್ಷಣ ಶಿಕ್ಷಕ ಹರಿಶ್ಚಂದ್ರ ಎಂ., ಶಾಲೆ ಸಂಚಾಲಕ ರಂಜನ್ ಜತ್ತನ್ನ , ಶಾಲಾ ಮುಖ್ಯ ಶಿಕ್ಷಕಿ ಝೀಠ ಮೆಂಡೋನ್ಸ ಉಪಸ್ಥಿತರಿದ್ದರು.

ಸಿಎಸ್‌ಐ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕಿ ಝೀಠ ಮೆಂಡೋನ್ಸ ಸ್ವಾಗತಿಸಿದರು. ಸಹ ಶಿಕ್ಷಕಿ ಎಲಿಜಬೆತ್ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ರೇಷ್ಮಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net