ಮಾಗಡಿಯಲ್ಲಿ ಬೋನಿಗೆ ಬಿದ್ದ ಚಿರತೆ

8c23e1da-26e0-486e-8082-be30f6878870-1.jpg
Published on

ಮಾಗಡಿ: ಜ್ಯೋತಿಪಾಳ್ಯದ ಬಳಿ ಅರಣ್ಯ ಇಲಾಖೆ ಇಟ್ಟಿದ ಬೋನಿಗೆ 3 ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ.

ತಾಲೋಕಿನ‌ ಹೊನ್ನಾಪುರ, ರಂಗನಾಥ ಪುರ, ವೆಂಗಳಪ್ಪನ ಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ‌ ಜನರಲ್ಲಿ ಬೀತಿ ಹುಟ್ಟಿಸಿದಲ್ಲದೆ, ರೈತರು ತಮ್ಮ ಜಮೀನುಗಳ ಬಳಿ ಕೆಲಸ ಕಾರ್ಯ ಹಾಗೂ ಸಾಕುಪ್ರಾಣಿಗಳನ್ನು ಮೇಯಿಸಲು ಕರೆದೋಯ್ಯಲು ಭಯಬೀತರಾಗಿದ್ದರು.

ಸುಮಾರು ತಿಂಗಳಿಂದ ರೈತರ ಸಾಕು ಪ್ರಾಣಿಗಳ ಮೇಲೆ ಚಿರತೆ ಏರಗಿ ಕುರಿ,ಮೇಕೆ‌ಗಳನ್ನು ಮೃತಗೊಳಿಸಿತು ಈ ಸಂಭದ ರೈತರಿಗೆ ಲಕ್ಷಾಂತರ ರೂ ನಷ್ಟ ಉಂಟಾಗಿ ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳ ಮನವಿ ಮಾಡಿದ ಹಿನ್ನಲೆಯಲ್ಲಿ ಎಚ್ಚೆತ್ತ ವಲಯ ಅರಣ್ಯಾಧಿಕಾರಿ ಚೈತ್ರ ಸ್ಥಳ ಪರಿಶೀಲನೆ ನಡೆಸಿ. ಜ್ಯೋತಿ ಪಾಳ್ಯದ ಗ್ರಾಮದ ಬಳಿ ಕಳೆದ ಎರಡು ದಿನಗಳ ಹಿಂದೆ ಬೋನ್ ಇಟ್ಟು ಕಾರ್ಯಚರಣೆ ಕೈಗೊಂಡಿದ್ದರು ಶುಕ್ರವಾರ ಮುಂಜಾನೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾದ ಕಾರಣ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net