

ಚಾಮರಾಜನಗರ: ನಗರದ ಹೊರವಲಯದ ಯಡಬೆಟ್ಟದ ತಪ್ಪಲ್ಲಿನಲ್ಲಿರುವ ಬಳಿಯ ಮೆಡಿಕಲ್ ಕಾಲೇಜಿನ ಕ್ವಾರ್ಟಸ್ಗೆ ಬುಧವಾರ ರಾತ್ರಿ ಚಿರತೆ ನುಗ್ಗಿದೆ.
ವೈದ್ಯರು ವಾಸ ಮಾಡುತ್ತಿರುವ ಕ್ವಾರ್ಟಸ್‌ನ ಮೊದಲ ಮಹಡಿಗೆ ಚಿರತೆ ಬಂದಿದೆ. ಜನರನ್ನು ನೋಡಿ ಮಹಡಿಯಿಂದ ಇಳಿದು ಯಡಬೆಟ್ಟದತ್ತ ಓಡಿ ಹೋಗಿದೆ.
ಚಿರತೆಯನ್ನು ಕ್ಬಾರ್ಟನ್ನ ಮೊದಲ ಮಹಡಿಯಲ್ಲಿ ಕಂಡ ಮೆಡಿಕಲ್ ಕಾಲೇಜು ಡೀನ್ ಡಾ.ಸಂಜೀವ್ ಅವರ ಪತ್ನಿ ಭಯದಿಂದ ಕಿರುಚಿಕೊಂಡಿದ್ದಾರೆ. ಅಡುಗೆ ಕೆಲಸ ಮಾಡುತ್ತಿದ್ದ ಶಿವ ಕೂಡ ಸ್ಥಳದಿಂದ ಓಡಿದ್ದಾನೆ.
ವಿಚಲಿತಗೊಂಡ ಚಿರತೆಯೂ ಸಹ ಮಹಡಿಯಿಂದ ಕೆಳಗಿಳಿದು ಓಡಿ ಹೋಗಿದೆ. ಚಿರತೆ ಮಹಡಿಯಿಂದ ಕೆಳಗಿಳಿಯುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.