ಬನ್ನೇರುಘಟ್ಟ ಉದ್ಯಾನವನಕ್ಕೆ ಚಿರತೆ ಮರಿ ರವಾನೆ

ಬನ್ನೇರುಘಟ್ಟ ಉದ್ಯಾನವನಕ್ಕೆ ಚಿರತೆ ಮರಿ ರವಾನೆ
Published on

ಗುಂಡ್ಲುಪೇಟೆ: ತಾಲೂಕಿನ ಹಂಗಳಪುರ ಗ್ರಾಮದ ಕಬ್ಬಿನಗದ್ದೆಯಲ್ಲಿ ಪತ್ತೆಯಾದ ಎರಡು ಚಿರತೆ ಮರಿಗಳನ್ನು ಅರಣ್ಯ ಇಲಾಖೆ ಬನ್ನೇರುಘಟ್ಟ ಉದ್ಯಾನವನಕ್ಕೆ ಕಳುಹಿಸಿದೆ.

ಆ.22ರಂದು ಗ್ರಾಮದ ಜಮೀನಿನಲ್ಲಿ ಕಬ್ಬು ಕತ್ತರಿಸುವ ಕಾರ್ಮಿಕರಿಗೆ ಎರಡು ಚಿರತೆ ಮರಿಗಳು ಸಿಕ್ಕಿದ್ದವು. ಸಣ್ಣಪುಟ್ಟ ಗಾಯಗಳಾಗಿದ್ದ ಮರಿಗಳಿಗೆ ಪಶುವೈದ್ಯರು ಚಿಕಿತ್ಸೆ ನೀಡಿದ ನಂತರ ಅರಣ್ಯ ಇಲಾಖೆ ಹಾಲುಣಿಸಿ ಆರೈಕೆ ಮಾಡಿತ್ತು.

ಮರಿಗಳನ್ನು ತಾಯಿಯೊಂದಿಗೆ ಸೇರಿಸಲು ಕಬ್ಬಿನಗದ್ದೆಯಲ್ಲಿ ಬೋನು ಅಳವಡಿಸಿ ಮರಿಗಳನ್ನು ಇರಿಸಲಾಗಿತ್ತು. ಎರಡು ದಿನಗಳಾದರೂ ತಾಯಿ ಚಿರತೆ ಬೋನಿನತ್ತ ಸುಳಿಯದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸೂಚನೆ ಮೇರೆಗೆ ಶನಿವಾರ ರಾತ್ರಿ ಎರಡು ಮರಿಗಳನ್ನು ಬನ್ನೇರುಘಟ್ಟ ಉದ್ಯಾನಕ್ಕೆ ಕಳಿಸಲಾಯಿತು. ಸದ್ಯ ಮರಿಗಳು ಚಟುವಟಿಕೆಯಿಂದ ಕೂಡಿವೆ ಎಂದು ಬಫರ್ ವಲಯದ ಪ್ರಭಾರ ಆರ್‌ಎಫ್‌ಒ ಸತೀಶ್ ಕುಮಾರ್ ವಿಜಯವಾಣಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net