

ಹಾವೇರಿ: ಒಂದು ತಿಂಗಳಿನಿಂದ ರೈತರು ಮತ್ತು ಸ್ಥಳೀಯರಲ್ಲಿ ಭಯ ಹುಟ್ಟಿಸಿದ್ದ ಚಿರತೆ ಇಂದು ನಸುಕಿನ ಜಾವ ಬೋನಿಗೆ ಬಿದ್ದಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ಮತ್ತು ಹಿರೆಕೇರೂರು ಮಧ್ಯಭಾಗದ ಅರಳಿಕಟ್ಟಿ ಗುಡ್ಡದಲ್ಲಿ ನಡೆದಿದೆ.
ಚಿರತೆ ಉಪಟಳ ಕಂಡು ಹಿರೆಕೇರೂರು ಅರಣ್ಯ ಅಧಿಕಾರಿಗಳು ಇಟ್ಟಿದ್ದ ಬೋನ್ಗೆ ಬಿದ್ದ ಚಿರತೆ 5 ವರ್ಷದ ಪ್ರಾಯದ್ದಾಗಿದೆ.
ಹದಿನೈದು ದಿನಗಳ ಹಿಂದೆ ಬೋನ್ ಇಟ್ಟಿದ್ದ ಅಧಿಕಾರಿಗಳು ಕಡೆಗೂ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಗಳು ಭೇಟಿ ಪರಿಶೀಲನೆ ನಡೆಸಿದ್ದು, ಚಿರತೆಯನ್ನು ಸುರಕ್ಷಿತವಾಗಿ ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ.