ಸವಣಾಲು ಅರಣ್ಯದಲ್ಲಿ ಚಿರತೆ ಕಳೇಬರ

Leopard
ಸಾಂದರ್ಭಿಕ ಚಿತ್ರ
Published on

ಬೆಳ್ತಂಗಡಿ: ಸವಣಾಲು ಗ್ರಾಮದ ಮೀಸಲು ಅರಣ್ಯ ಪ್ರದೇಶ ಇತ್ತಿಲಪೇಲ ಎಂಬಲ್ಲಿ ಕಾಲುಗಳನ್ನು ಕತ್ತರಿಸಿ ಕೊಳೆತ ಸ್ಥಿತಿಯಲ್ಲಿ ಚಿರತೆಯ ಕಳೇಬರ ಪತ್ತೆಯಾಗಿದೆ. ಸ್ಥಳಕ್ಕೆ ಕಾರ್ಕಳ ಮತ್ತು ಬೆಳ್ತಂಗಡಿ ವನ್ಯಜೀವಿ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿದೆ. ನಾಲ್ಕು ಕಾಲುಗಳೂ ತುಂಡರಿಸಿದ ಸ್ಥಿತಿಯದ್ದು, ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್‌ಎಫ್‌ಒ ಶರ್ಮಿತಾ ನೇತೃತ್ವದ ತಂಡ ಪರಿಶೀಲಿಸಿದೆ. ಕಾಲಿನ ಉಗುರುಗಳಿಗಾಗಿ ದುಷ್ಕರ್ಮಿಗಳು ಚಿರತೆಯನ್ನು ಹತ್ಯೆಗೈದಿರುವ ಅನುಮಾನ ವ್ಯಕ್ತವಾಗಿದೆ. ಬೆಳ್ತಂಗಡಿ ವನ್ಯಜೀವಿ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net