ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ ಆಮಂತ್ರಣ ಬಿಡುಗಡೆ

New Project (20)
Published on

ಗುರುಪುರ: ಸುರತ್ಕಲ್ ಸ್ಪೋರ್ಟ್ಸ್- ಕಲ್ಚರಲ್ ಕ್ಲಬ್ ಆಶ್ರಯದಲ್ಲಿ ನಡೆಯುವ 4ನೇ ವರ್ಷದ ರಾಜ್ಯಮಟ್ಟದ 45 ವರ್ಷ ಮೇಲ್ಪಟ್ಟ ಆಟಗಾರರ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್- 4 ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕ ಶಂಕರನಾರಾಯಣ ಭಟ್ ಬಿಡುಗಡೆಗೊಳಿಸಿದರು.

ಸಂಸ್ಥೆಯ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಮಾತನಾಡಿ, ಪಂದ್ಯಾಕೂಟ ಏಪ್ರಿಲ್ 5 ಮತ್ತು 6ರಂದು ಗೋವಿಂದದಾಸ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾಜ್ಯದ ಬೆಂಗಳೂರು, ಶಿವಮೊಗ್ಗ, ಅರಸೀಕೆರೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ 14 ತಂಡಗಳು ಭಾಗವಹಿಸಲಿವೆ ಎಂದರು.

ಸಂಚಾಲಕ ಮನೋಹರ್ ಶೆಟ್ಟಿ ಸೂರಿಂಜೆ, ಉಪಾಧ್ಯಕ್ಷ ನಾಗರಾಜ್ ಕಡಂಬೋಡಿ, ಕಾರ್ಯದರ್ಶಿ ಕಿರಣ್ ಆಚಾರ್ಯ, ಪದಾಧಿಕಾರಿಗಳಾದ ಕುಶಲ ಮಣಿಯಾಣಿ, ಸಂತೋಷ್ ಬೇಕಲ್, ಲೀಲಾಧರ ಕಡಂಬೋಡಿ, ಶಿವಪ್ರಸಾದ್, ಅನಂತರಾಜ್ ಶೆಟ್ಟಿಗಾರ್, ನಿರಂಜನ್ ಶೆಟ್ಟಿ, ಓಂಪ್ರಕಾಶ್ ಶೆಟ್ಟಿಗಾರ್ ಕಡಂಬೋಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net