

ಬೆಳ್ತಂಗಡಿ: ವಕೀಲರ ಸಂಘ ಮತ್ತು ಕ್ಲೂ ಫಾರ್ ಎವಿಡೆನ್ಸ್ ಫಾರೆನ್ಸಿಕ್ ಲ್ಯಾಬ್ ಬೆಂಗಳೂರು ಸಹಯೋಗದಲ್ಲಿ ಇಂಪಾರ್ಟೆನ್ಸ್ ಆಫ್ ಫಾರೆನ್ಸಿಕ್ಸ್ ಇನ್ ಲಿಟಿಗೇಷನ್ ಕಾನೂನು ಮಾಹಿತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಾಗಾರದಲ್ಲಿ ಬೆಂಗಳೂರು ಕ್ಲೂ ಫಾರ್ ಎವಿಡೆನ್ಸ್ ಫಾರೆನ್ಸಿಕ್ ಲ್ಯಾಬ್ ನಿರ್ದೇಶಕ ಫನೀಂದರ್ ಬಿ. ಎನ್. ಮಾಹಿತಿ ನೀಡಿದರು.
ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಹಿರಿಯ ನ್ಯಾಯಾಲಯದ ನ್ಯಾಯಾಧೀಶ ಮನು ಬಿ.ಕೆ, ಪ್ರಧಾನ ಸಿವಿಲ್ ನ್ಯಾಯಾಧೀಶ ಸಂದೇಶ್ ಕೆ. ಮತ್ತು ಹೆಚ್ಚುವರಿ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್, ಬೆಳ್ತಂಗಡಿಯ ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು, ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್ ಎ, ಸರ್ಕಾರಿ ವಕೀಲರು, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು.