

ಉಪ್ಪಿನಂಗಡಿ: ಹಿರೇಬಂಡಾಡಿಯಲ್ಲಿ ಕಳೆದ ಮೂರು ದಿನಗಳಿಂದ ಬೀಡುಬಿಟ್ಟಿದ್ದ ಕಾಡಾನೆ ಬುಧವಾರವೂ ಅಲ್ಲೇ ಠಿಕಾಣಿ ಹೂಡಿದ್ದು, ಹಲವೆಡೆ ಕೃಷಿ ಬೆಳೆಗಳನ್ನು ಹಾನಿಗೊಳಿಸಿದೆ.
ಗ್ರಾಮದ ಕೊಳ್ಳೆಜಾಲು ಎಂಬಲ್ಲಿನ ಯಾಕೂಬ್, ಸಂತು ನಲಿಕೆ, ಅಡೆಕ್ಕಲ್ ಪರಿಸರದ ಪ್ರಕಾಶ್ ರೈ, ವಿಶ್ವನಾಥ್ ಆಕಿರೆ ಎಂಬುವವರ ತೋಟದಲ್ಲಿ ಅಲೆದಾಡುತ್ತಿದ್ದ ಕಾಡಾನೆ ಕೃಷಿತೋಟಗಳಿಗೆ ಹಾನಿಯುಂಟು ಮಾಡಿದೆ. ಅರಣ್ಯ ಇಲಾಖಾ ಸಿಬ್ಬಂದಿ ಮತ್ತು ಸ್ಥಳೀಯರು ಆನೆಯನ್ನು ಕಾಡಿಗಟ್ಟಲು ಹರಸಾಹಸ ಪಡುತ್ತಿದ್ದಾರೆ.