ಎಡದಂಡೆ ನಾಲೆಗೆ ಶೀಘ್ರವೇ ಮಂಚನಬೆಲೆ ನೀರು

Nale Work Veksane
Published on

* ಶಾಸಕ ಇಕ್ಬಾಲ್ ಹುಸೇನ್ ಭರವಸೆ

* 25 ಸಾವಿರ ಎಕರೆಗೆ ನೀರಾವರಿ ಸೌಲ‘್ಯ

ರಾಮನಗರ

ಮಂಚನಬೆಲೆ ಎಡ ಮತ್ತು ಬಲದಂಡೆ ನಾಲೆಗಳಲ್ಲಿ ನೀರು ಹರಿಯುವುದು ಜಿಲ್ಲೆಯ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೇ ಉಳಿಯುವ ಕಾರ್ಯಕ್ರಮವಾಗಿದೆ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ತಿಳಿಸಿದರು.

ರಾಮನಗರ ತಾಲೂಕಿನ ಹಾಗಲಹಳ್ಳಿ ಬಳಿ  ಮಂಚನಬೆಲೆ ಎಡದಂಡೆ ನಾಲೆಗೆ ನೀರು ಹರಿಸುವ ವಿಚಾರವಾಗಿ ನಾಲೆಗಳ ಅಭಿವೃದ್ಧಿ ಕೆಲಸ ಪರಿಶೀಲಿಸಿ ಮಾತನಾಡಿ, ನೀರಿದ್ದರೆ ಜನ ಕೃಷಿಯತ್ತ ಮುಖಮಾಡಿ ಉತ್ತಮವಾದ ಬದುಕು ಕಟ್ಟಿಕೊಳ್ಳಬಹುದು. ರೇಷ್ಮೆ ಮತ್ತು ಹೈನುಗಾರಿಕೆಯಲ್ಲಿ ಜನ ಮುಖಮಾಡಿದ್ದಾರೆ ಎಂದರು.

ಮಂಚನಬೆಲೆ ಎಡ - ಬಲದಂಡೆ ನಾಲೆಗಳು 30 ವರ್ಷಗಳ ಹಿಂದೆಯೇ ನೀರು ಹರಿದು ಜೀವನಾಡಿಯಾಗಬೇಕಿತ್ತು. ಆದರೆ, ನಾಲೆಗಳಲ್ಲಿ ನೀರು ಹರಿಯಲಿಲ್ಲ. ಇದರಿಂದ ಯೋಜನೆ ಜನರಿಗೆ ತಲುಪದಾಯಿತು. ಈಗ ಇದನ್ನು ಕೈಗೆತ್ತಿಕೊಂಡಿದ್ದು, ನಾಲೆಗೆ ನೀರು ಹರಿಸಿ ಜೀವನಾಡಿಯಾಗಿ ಮಾಡುವುದು ನಮ್ಮ ಕರ್ತವ್ಯವಾಗಿದೆ. ಈ ‘ಭಾಗದಲ್ಲಿ ಜನರು ಸಾಕಷ್ಟು ಕನಸು ಕಟ್ಟಿಕೊಂಡಿದ್ದು, ನಾಲೆಗಳಲ್ಲಿ ನೀರು ಹರಿದರೆ ಸಾವಿರಾರು ಕುಟುಂಬಗಳು ವಲಸೆಯತ್ತ ಕಣ್ಣುಹಾಯಿಸದೆ ಕೃಷಿಯತ್ತ ಮುಖ ಮಾಡಲಿವೆ ಎಂದು ಅಭಿಪ್ರಾಯಪಟ್ಟರು.

ನೂರಾರು ಯುವಕರು ಉದ್ಯೋಗ ಹರಸಿ ಬೆಂಗಳೂರಿನತ್ತ ವಲಸೆ ಹೋಗುವುದು ತಪ್ಪುತ್ತದೆ. ನೀರು ಹರಿದರೆ ಕೃಷಿಯತ್ತ ಮುಖ ಮಾಡಲು ಸಹಾಯಕವಾಗುತ್ತದೆ. ನನೆಗುದಿಗೆ ಬಿದ್ದು ತನ್ನ ಸ್ವರೂಪವನ್ನೇ ಕಳೆದುಕೊಂಡ ನಾಲೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಈಗಾಗಲೇ 20 ಕಿ.ಮೀ ನಾಲಾ ಅಭಿವೃದ್ಧಿ ಕೆಲಸ ಆಗಿದೆ. ಉಳಿದ 10 ಕಿಮೀ. ಪ್ರಗತಿಯಲ್ಲಿದೆ. 15 ದಿನಗಳಲ್ಲಿ ಎಡದಂಡೆ ನಾಲೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಿ ಸಮಸ್ಯೆ ಇದ್ದರೆ ತಿಳಿಯುವ ಕೆಲಸ ಮಾಡಲಾಗುತ್ತದೆ. ಸಣ್ಣಪುಟ್ಟ ರಿಪೇರಿ ಸೋರುವಿಕೆ ಇದ್ದರೆ ಗುರ್ತಿಸಿ ಸರಾಗವಾಗಿ ನೀರು ಹರಿಸುವ ಕೆಲಸ ಮಾಡಲಾಗುತ್ತದೆ. ಸುಮಾರು 25 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಲಿದೆ ಎಂದರು.

ಕಾಲ್ನಡಿಗೆ ವೀಕ್ಷಣೆ

ಬೆಳಗ್ಗೆ 7 ಗಂಟೆಗೆ ಮಂಚನಬೆಲೆ ಹತ್ತಿರದಿಂದ ಎಡ ದಂಡೆ ನಾಲಾ ವೀಕ್ಷಣೆಗೆ ಮುಂದಾದ ಶಾಸಕ ಇಕ್ಬಾಲ್ ಹುಸೇನ್, ಮುಖಂಡರು, ಅಧಿಕಾರಿಗಳೊಂದಿಗೆ ಗದಗಯ್ಯನದೊಡ್ಡಿ, ಹಾಗಲಹಳ್ಳಿ, ಕಗ್ಗಲಹಳ್ಳಿ, ರಾಂಪುರ, ಕರಡೀದೊಡ್ಡಿವರೆಗೆ ಸುಮಾರು 10 ಕಿ.ಮೀ. ದೂರ ಕಾಲ್ನಡಿಗೆಯಲ್ಲಿಯೇ ನಡೆದು ನಾಲಾ ಅಭಿವೃದ್ಧಿ ಕೆಲಸ ವೀಕ್ಷಣೆ ನಡೆಸಿದರು.

ಇದೇ ವೇಳೆ ಮಂಚನಬೆಲೆ ಜಲಾಶಯಕ್ಕೆ ಕೊಳಚೆ ನೀರು ಸೇರುತ್ತಿದೆ. ಅಗತ್ಯ ಕ್ರಮ ಕೈಗೊಳ್ಳುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ಇಕ್ಬಾಲ್ ಹುಸೇನ್, ಈಗಾಗಲೇ ನನ್ನ ಗಮನಕ್ಕೂ ಬಂದಿದ್ದು, ಅಧಿಕಾರಿಗಳ ತೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಪ್ರಾಧಿಕಾರ ಅಧ್ಯಕ್ಷ ಎ.ಬಿ. ಚೇತನ್‌ಮಾರ್, ಸುಗ್ಗನಹಳ್ಳಿ ಗ್ರಾಪಂ ಉಪಾಧ್ಯಕ್ಷ ಚಿಕ್ಕಸ್ವಾಮಿ, ಹರೀಸಂದ್ರ ಗ್ರಾಪಂ ಉಪಾಧ್ಯಕ್ಷ ವೀರಭದ್ರಸ್ವಾಮಿ, ಮುಖಂಡರಾದ ರವಿ, ರೈಡ್ ನಾಗರಾಜು, ಉಮಾಶಂಕರ್, ಆಂಜನಪ್ಪ, ವಾಸು, ಎಂ. ರೇವಣ್ಣ, ವಸಂತ, ಗೋವಿಂದರಾಜು, ಪ್ರಕಾಶ್, ಗಂಗಾಧರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net