ಹಲಸಂಗಿ ಗೆಳೆಯರಿಂದ ಜಾನಪದ ಸಾಹಿತ್ಯಕ್ಕೆ ಹೊಸ ಭಾಷ್ಯ : ಪ್ರೊ.ರಾಜಶೇಖರ ಹಳೆಮನೆ ಬಣ್ಣನೆ

New Project (17)
Published on

ಬಂಟ್ವಾಳ: ಹಲಸಂಗಿ ಗೆಳೆಯರ ಸಾಹಿತ್ಯಿಕ ಚಟುವಟಿಕೆಗಳು ಸದಾ ಸ್ಮರಣೀಯ. ಅವರು ಆ ಕಾಲದಲ್ಲಿ ಜಾನಪದ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದರು ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರೊ.ರಾಜಶೇಖರ ಹಳೆಮನೆ ಹೇಳಿದರು.

ವಿಜಯಪುರ ಹಲಸಂಗಿ ಗೆಳೆಯರ ಪ್ರತಿಷ್ಠಾನ ಶನಿವಾರ ವಾಮದಪದವು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಒಂದು ದಿನದ ರಾಜ್ಯಮಟ್ಟದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಲಸಂಗಿ ಗೆಳೆಯರ ಹಾಡು ಪಾಡು ಕುರಿತು ಸಾಹಿತಿ ಡಾ.ಶಂಕರ ಬೈಚಬಾಳ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಪ್ರೊ.ಜಯರಾಂ ಅಧ್ಯಕ್ಷತೆ ವಹಿಸಿದ್ದರು. ನೀಲಕಂಠೇಶ್ವರ ಕಲಾತಂಡದವರು ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಹಾಗೂ ಕುವೆಂಪು ಅವರ ರಾಮಾಯಣ ದರ್ಶನಂ ಕಾವ್ಯದ ರೂಪಕ ಪ್ರದರ್ಶನವನ್ನು ಅಭಿಜೀತ ತಂಡದ ಸದಸ್ಯರು ನೀಡಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸಿದ್ಧಪಡಿಸಿದ ‘ನಿಚ್ಚಂ ಪೊಸತು’ ಮಾಸಿಕ ಗೋಡೆ ಪತ್ರಿಕೆಯನ್ನು ಹಲಸಂಗಿ ಗೆಳೆಯರ ಬಳಗದ ಸದಸ್ಯ ಸಂಚಾಲಕ ಡಾ.ರಮೇಶ ಕತ್ತಿ ಬಿಡುಗಡೆಗೊಳಿಸಿದರು.

ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಪುಟ್ಟಲಕ್ಷ್ಮಮ್ಮ ಉಪಸ್ಥಿತರಿದ್ದರು. ಐಕ್ಯುಎಸಿ ಸಂಚಾಲಕ ಡಾ.ವಿಶಾಲ್ ಪಿಂಟೋ ಸ್ವಾಗತಿಸಿದರು. ಡಾ.ರಮೇಶ್ ಎಸ್.ಕತ್ತಿ ಪ್ರಸ್ತಾವಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಲೋಹಿತ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net