ಉಪನ್ಯಾಸ ಕಾರ್ಯಕ್ರಮ ಇಂದು

Published on

ಅಳವಂಡಿ: ಸಮೀಪದ ಕವಲೂರು ಸರ್ಕಾರಿ ಮಾದರಿ ಹಿರಿಯ ಹಾಗೂ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಸಾಪ ಜಿಲ್ಲೆ, ತಾಲೂಕು ಹಾಗೂ ಹೊಬಳಿ ಘಟಕದಿಂದ ಉಪನ್ಯಾಸ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಡಿ.10ರಂದು ನಡೆಯಲಿದೆ.

ಮಕ್ಕಳ ಸಾಹಿತ್ಯ ಕುರಿತು ಮುಂಡರಗಿ ಸಾಹಿತಿ ನಿಂಗು ಸೊಲಗಿ, ಜಾನಪದ ಸಾಹಿತ್ಯ ಕುರಿತು ಶಿಕ್ಷಕ ನೀಲಪ್ಪ ಹಕ್ಕಂಡಿ ಉಪನ್ಯಾಸ ನೀಡಲಿದ್ದಾರೆ. ಮಕ್ಕಳಿಂದ ಕವಿಗೋಷ್ಠಿ, ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.

ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಮುತ್ತಣ್ಣ ಬಿಸರಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಉದ್ಘಾಟಕರಾಗಿ ಭೂದಾನಿ ಪ್ರದೀಪಗೌಡ ಮಾಲಿಪಾಟೀಲ, ಕಸಾಪ ತಾಲೂಕು ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ, ಅತಿಥಿಗಳಾಗಿ ಎಸ್ಡಿಎಂಸಿ ಅಧ್ಯಕ್ಷರಾದ ಮಹಾಂತೇಶ ಸಿಂದೋಗಿಮಠ, ನಾಗರಾಜ ಕಗ್ಗಲ್, ಗ್ರಾಪಂ ಉಪಾಧ್ಯಕ್ಷೆ ಅನ್ನಪೂರ್ಣಾ, ಮುಖ್ಯ ಶಿಕ್ಷಕರಾದ ಮಲ್ಲಣ್ಣ ಗೊರವರ, ಗಿರಿಯಪ್ಪ ಹಮ್ಮಗಿ, ಸಾಹಿತಿಗಳಾದ ಕಿರಣ ಅಂಗಡಿ, ಜುನಸಾಬ ಭಾಗವಹಿಸಲಿದ್ದಾರೆ ಎಂದು ಪರಿಷತ್ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net