

ಮೂಡಿಗೆರೆ: ಕನ್ನಡ ಸಾಹಿತ್ಯ ಸಂಭ್ರಮ ವೇದಿಕೆಯಿಂದ 24ರಂದು ಪಟ್ಟಣದ ದೀನ ದಯಾಳ್ ಸಭಾ ಭವನದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಕವಿ ಕಾವ್ಯ ಸಮ್ಮೇಳನ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಸಂಭ್ರಮ ವೇದಿಕೆ ರಾಜ್ಯಾಧ್ಯಕ್ಷ ಎಂ.ಎಸ್.ನಾಗರಾಜ್ ತಿಳಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಮೇಕನಗದ್ದೆ ಲಕ್ಷ್ಮಣ ಗೌಡ ಆಯ್ಕೆಯಾಗಿದ್ದಾರೆ. ಬೆಳಗ್ಗೆ 9:30ಕ್ಕೆ ರಾಜ್ಯಮಟ್ಟದ ಕವಿ ಕಾವ್ಯ ಸಮ್ಮೇಳನ ನಡೆಯಲಿದ್ದು, ಹಿರಿಯ ಸಾಹಿತಿ ಹಳೆಕೋಟೆ ರಮೇಶ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಂಗೀತ ನಿರ್ದೇಶಕ ಮಹೇಶ್ ಪ್ರಿಯದರ್ಶನ್ ಸಮ್ಮೇಳನದ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಶಾಸಕಿ ನಯನಾ ಮೋಟಮ್ಮ, ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಸೇರಿದಂತೆ ಅನೇಕ ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಎಂ.ಎಸ್.ನಾಗರಾಜ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ರಂಗಭೂಮಿ ಕಲಾವಿದ ಉಪನ್ಯಾಸಕ ಎಚ್.ಎಂ.ನಾಗರಾಜ ರಾವ್ ಕಲ್ಕಟ್ಟೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. 8 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಚಲನಚಿತ್ರ ಹಿನ್ನೆಲೆ ಗಾಯಕ ಶೃತಿ ಪ್ರಿಯದರ್ಶನ್, ಜಾನಪದ ಗಾಯಕ ಬಕ್ಕಿ ರವೀಂದ್ರ ಗೆ ಕರುನಾಡ ಗಾನಸಿರಿ ಪ್ರಶಸ್ತಿ, ಕಿರುಚಿತ್ರ ನಿರ್ದೇಶಕ ನವೀನ್ ಆನೆದಿಬ್ಬ, ನೃತ್ಯ ನಿರ್ದೇಶಕ ಅಜಿತ್ ಕೆವಿಯಾರ್‌ಗೆ ಮಲೆನಾಡು ಕಲಾಸಿರಿ ಪ್ರಶಸ್ತಿ, ಪತ್ರಕರ್ತ ಪ್ರಸನ್ನ ಗೌಡಳ್ಳಿ ಹಾಗೂ ವಿಜಯವಾಣಿ ವರದಿಗಾರ ಕಿರುಗುಂದ ಅಬ್ಬಾಸ್‌ಗೆ ಮಾಧ್ಯಮ ರತ್ನ ಪ್ರಶಸ್ತಿ, ಸಮಾಜ ಸೇವಕ ಅಬ್ದುಲ್ ರಹಿಮಾನ್ ಮತ್ತು ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಮಾಸ್ಟರ್ ಪ್ರವೀಣ್ ಪೂಜಾರಿಗೆ ಕರುನಾಡ ಸೇವಾ ಸಿರಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದರು.