ವಿದ್ಯಾಶ್ರೀಯಲ್ಲಿ ಕಗ್ಗ ಪ್ರವಚನ

kagga
ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಮಂಕುತಿಮ್ಮನ ಕಗ್ಗದ ಕುರಿತು ಉಪನ್ಯಾಸ ನಡೆಯಿತು.
Published on

ಮುಳ್ಳೇರಿಯ: ಇಲ್ಲಿನ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಮಂಕುತಿಮ್ಮನ ಕಗ್ಗದ ಕುರಿತು ಉಪನ್ಯಾಸ ನಡೆಯಿತು. ಪ್ರಾರ್ಥನಾ ಸಭೆ ಬಳಿಕ ವಿದ್ವಾನ್ ಜಿ.ಎಸ್.ನಟೇಶ್ ಮಂಕುತಿಮ್ಮನ ಕಗ್ಗಗಳನ್ನು ವ್ಯಾಖ್ಯಾನಿಸಿ ಉಪನ್ಯಾಸ ನೀಡಿದರು.

ಅಗಲ್ಪಾಡಿ ಕ್ಷೇತ್ರದ ಆಡಳಿತ ಮೊಕ್ತೇಸರ ಅನಂತ ಗೋವಿಂದ ಶರ್ಮ ಕೋಳಿಕ್ಕಜೆ, ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ ಎಡಪ್ಪಾಡಿ, ಮುಖ್ಯಶಿಕ್ಷಕ ವೇಣುಗೋಪಾಲನ್ ನಾಯರ್, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಅನಂತ ಗೋವಿಂದ ಶರ್ಮ ಮಕ್ಕಳಿಗೆ ಸಂಸ್ಕಾರಯುತವಾಗಿ ಬದುಕಬೇಕೆಂದು ಕಿವಿಮಾತು ಹೇಳಿದರು. ಶಾಲಾ ವ್ಯವಸ್ಥಾಪಕ ಗಣೇಶ ವತ್ಸ ವಿದ್ವಾನ್ ಜಿ.ಎಸ್.ನಟೇಶ್ ಅವರನ್ನು ಸನ್ಮಾನಿಸಿದರು. ಬಾಲಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ ನಿರೂಪಿಸಿದರು. ಒಂಬತ್ತನೇ ತರಗತಿಯ ಸಮರ್ಥ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net