ಸದೃಢ ಕುಟುಂಬವಿದ್ದರೆ ದೇಶದ ಆರ್ಥಿಕ ಸ್ಥಿತಿ ಸದೃಢ: ಪ್ರೊ.ಆರ್​.ವೈದ್ಯನಾಥನ್​ ಅಭಿಮತ

vv (3)
Published on

ಬೆಂಗಳೂರು: ದೇಶ ಹಂತಹಂತವಾಗಿ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದೆ. ಅಸ್ತಿತ್ವದಲ್ಲಿರುವ ಸದೃಢ ಕುಟುಂಬ ವ್ಯವಸ್ಥೆ ಮತ್ತು ಅದರ ಮೌಲ್ಯಗಳಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಭಾರತೀಯ ನಿರ್ವಹಣಾ ಸಂಸ್ಥೆಯ (ಐಐಎಂ) ಬೆಂಗಳೂರು ವಿಭಾಗದ ನಿವೃತ್ತ ಪ್ರಾಧ್ಯಾಪಕ ಪೊ. ಆರ್​. ವೈದ್ಯನಾಥನ್​ ಹೇಳಿದ್ದಾರೆ.

ಮಿಥಿಕ್​ ಸೊಸೈಟಿ ಭಾನುವಾರ ಆಯೋಜಿಸಿದ್ದ ಪೊ. ಎಂ.ವಿ. ಕೃಷ್ಣರಾವ್​ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ 'ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಭಾರತದ ಮೇಲೆ ಅದರ ಪರಿಣಾಮಗಳು' ಕುರಿತು ಮಾತನಾಡಿದರು.

ಭಾರತದಲ್ಲಿ ಸಾಮಾನ್ಯ ಮಹಿಳೆ ತನ್ನ ಕುಟುಂಬದ ಆರ್ಥಿಕ ರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾಳೆ. ಬದಲಾದ ಆರ್ಥಿಕ ಚಿತ್ರಣದಲ್ಲಿ ತಂತ್ರಾನದ ವ್ಯಾಪಕ ಬಳಕೆ ಭಾರತದ ಅರ್ಥ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಡಿಜಿಟಲ್​ ಪಾವತಿ, ಆನ್​ಲೈನ್​ ಸೇವೆಗಳು ದೇಶದಲ್ಲಿ ಭ್ರಷ್ಟಾಚಾರವನ್ನು ಸಣ್ಣ ಪ್ರಮಾಣದಲ್ಲಿ ನಿಯಂತ್ರಿಸುತ್ತಿದೆ. ಈ ಕಾರಣದಿಂದ ಇಡೀ ವಿಶ್ವ ಇಂದು ಭಾರತದ ಆರ್ಥಿಕ ಚಿತ್ರಣದ ಬೆಳವಣಿಗೆಯನ್ನು ಗಮನಿಸುತ್ತಿದೆ ಎಂದರು.

ಪಂಡಿತ್​ ಎ. ಸುಬ್ಬಯ್ಯಶಾಸ್ತ್ರಿ ಸ್ಮಾರಕ ದತ್ತಿ ಉಪನ್ಯಾಸದಲ್ಲಿ 'ಜೈನ ಆಗಮಗಳ ಆಗಮನ: ಒಂದು ಚಿಂತನೆ ವಿಷಯ' ಕುರಿತು ಕರ್ನಾಟಕ ಸಂಸತ ವಿವಿ ಯೋಜನಾ ಸಹಾಯಕಿ ಡಾ.ಡಿ.ತೇಜಸ್ವಿನಿ ಮಾತನಾಡಿ, ಜೈನ ಧರ್ಮವು ಜೀವನ್ಮುಕ್ತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ದಿ ಮಿಥಿಕ್​ ಸೊಸೈಟಿ ಅಧ್ಯ ವಿ.ನಾಗರಾಜ್​, ಗೌರವ ಕಾರ್ಯದರ್ಶಿ ಎಸ್​.ರವಿ ಇದ್ದರು.

ಕುಟುಂಬ ವ್ಯವಸ್ಥೆಯ ಬೇರು ಸಡಿಲ

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕುಟುಂಬ ವ್ಯವಸ್ಥೆಯ ಬೇರು ಸಡಿಲಗೊಳ್ಳಲು ಪ್ರಾರಂಭಿಸಿವೆ. ಈ ಸಾಮಾಜಿಕ ಬದಲಾವಣೆ ಜಾಗತಿಕ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಜತೆಗೆ ನಿರಾಶ್ರಿತರ ವಲಸೆ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಅಸಮತೋಲನ ಉಂಟುಮಾಡುತ್ತಿದೆ. ಜಪಾನ್​ ಮುಂತಾದ ರಾಷ್ಟ್ರಗಳಲ್ಲಿ ಜನಸಂಖ್ಯೆ ಪ್ರಮಾಣ ತೀವ್ರವಾಗಿ ಕುಸಿಯುತ್ತಿರುವುದು, ಯುರೋಪಿಯನ್​ ರಾಷ್ಟ್ರಗಳಲ್ಲಿ ಬಲಪಂಥೀಯ ಶಕ್ತಿಗಳ ಬೆಳವಣಿಗೆ ಮತ್ತು ಆ ದೇಶಗಳಲ್ಲಿಯೇ ನಡೆಯುತ್ತಿರುವ ಆಂತರಿಕ ಯುದ್ಧದ ಪರಿಸ್ಥಿತಿಯನ್ನು ವಿಷಮ ಸ್ಥಿತಿಗೆ ಕೊಂಡೊಯ್ಯುತ್ತಿವೆ ಎಂದು ಪೊ. ಆರ್​. ವೈದ್ಯನಾಥನ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net