ಸಂಸ್ಕಾರ, ಏಕಾಗ್ರತೆಗೆ ಸಂಗೀತ ಕಲಿಕೆ

sangeetha
ಶಾಸ್ತ್ರೀಯ ಸಂಗೀತ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಿತು.
Published on

ಕಾರ್ಕಳ: ಶಾಸ್ತ್ರೀಯ ಸಂಗೀತ ಬಾಲ್ಯದಲ್ಲಿ ಕಲಿಯುವುದರಿಂದ ವ್ಯಕ್ತಿ ಸಂಸ್ಕಾರವಂತರಾಗುತ್ತಾರೆ. ಸಂಗೀತ ವ್ಯಕ್ತಿಯ ಏಕಾಗ್ರತೆಗೆ ಕಾರಣವಾಗುತ್ತದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಬಿ.ಸುಬ್ರಾಯ ಪೈ ಹೇಳಿದರು.

ಕಾರ್ಕಳದಲ್ಲಿ ಇತ್ತೀಚೆಗೆ 33ನೇ ಶಾಸ್ತ್ರೀಯ ಸಂಗೀತ ಮಹೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿ ಪ್ರದೀಪ್ ಜಿ. ಪೈ ಶುಭಹಾರೈಸಿದರು. ಉಸ್ತಾದ್ ಜಾಕಿರ್ ಹುಸೇನ್ ಸ್ಮರಣಾರ್ಥ ಶ್ರದ್ಧಾ ಸುಮನ್ ನಡೆಯಿತು. ಪಂಡಿತ್ ರಾಮ್ ಕುಮಾರ್ ಮಿಶ್ರ ಹಾಗೂ ರಾಹುಲ್ ಕುಮಾರ್ ಮಿಶ್ರಾರಿಂದ ತಬ್ಲಾ ಜುಗಲ್ ಬಂಧಿ ಯಶಸ್ವಿಯಾಗಿ ನಡೆಯಿತು. ಸುರಮಣಿ ಮಹಾಲಕ್ಷ್ಮಿ ಶೈಣೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾಕ್ಟರ್ ಪ್ರಕಾಶ್ ಶೆಣೈ ಸ್ವಾಗತಿಸಿದರು. ಕೋಶಾಧಿಕಾರಿ ಪ್ರಭಾಕರ್ ಪಂಡಿತ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net