

ರಾವಂದೂರು: ಮಕ್ಕಳಲ್ಲಿ ಇರುವ ಶೈಕ್ಷಣಿಕ ಪ್ರತಿಭೆ ಹೊರಹೊಮ್ಮಲು ಕಲಿಕಾ ಹಬ್ಬ ಒಂದು ಸೂಕ್ತ ಅವಕಾಶವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವಿಪ್ರಸನ್ನ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕು ಮಾಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ, ಶೈಕ್ಷಣಿಕ ಪ್ರಗತಿ, ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ತಿಳಿಯಲು ಶಿಕ್ಷಕರಿಗೆ ಒಂದು ಸೂಕ್ತ ಅವಕಾಶ ಇದೆ. ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರತೆಗೆಯಲು ಕಲಿಕಾ ಹಬ್ಬ ಒಂದು ಸೂಕ್ತ ವೇದಿಕೆಯಾಗಿದೆ. ಮಕ್ಕಳು ಯಾವ ಯಾವ ವಿಷಯದಲ್ಲಿ ಉತ್ತಮ ಕಲಿಕೆಯನ್ನು ತೋರಿಸುತ್ತಾರೆ ಎಂಬುದನ್ನು ಶಿಕ್ಷಕರು ತಿಳಿಯಲು ಇದು ಸಹಕಾರಿಯಾಗಿದೆ ಎಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ್, ಡಯಟ್ ಹಿರಿಯ ಉಪನ್ಯಾಸಕರಾದ ಅಖಿಲಾಂಡೇಶ್ವರಿ, ಹುಷಾರಾಣಿ, ಸಿಆರ್‌ಪಿಗಳಾದ ನಾಗೇಶ್, ನಟರಾಜ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಯೀಂ ಪಾಷ, ಮುಖ್ಯಶಿಕ್ಷಕ ನಾಗೇಶ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಾಜರಿದ್ದರು.