ಪ್ರಕೃತಿಯೊಂದಿಗೆ ಬದುಕುವುದನ್ನು ಕಲಿಯಿರಿ: ರಘು ಇಡ್ಕಿದು ಸಲಹೆ

Ksd_Nature
Published on

ಕಾಸರಗೋಡು: ಪ್ರಕೃತಿಯ ಸಂರಕ್ಷಣೆಯಿಂದ ಮಾತ್ರ ಜೀವಸಂಕುಲದ ಉಳಿವು ಸಾಧ್ಯ. ಈ ಭೂಮಿ ನಮಗೆ ಎಲ್ಲವನ್ನೂ ನೀಡಿದೆ. ಔಷಧೀಯ ಗುಣ ಅಡಕವಾಗಿರುವ ಗಿಡ, ಸೊಪ್ಪು, ಬೇರುಗಳು ಲಭ್ಯವಿದೆ. ಪ್ರಕೃತಿಯನ್ನು ಪ್ರೀತಿಸಿ, ಅದರೊಂದಿಗೆ ಬದುಕು ಸಾಧಿಸುವುದನ್ನು ನಾವು ಕಲಿತುಕೊಳ್ಳಬೇಕಾಗಿದೆ ಎಂದು ಉಪನ್ಯಾಸಕ ರಘು ಇಡ್ಕಿದು ಹೇಳಿದರು.

ಪೆರ್ಲ ಏಕದಂತ ಬಳಗ ಹಾಗೂ ಏಕದಂತ ಕಲಾವಿದೆರ್ ಕುಡ್ಲ ವತಿಯಿಂದ ಪೆರ್ಲ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಆಟಿ ಸಂಭ್ರಮ, ಸನ್ಮಾನ ಸಮಾರಂಭದಲ್ಲಿ ಆಟಿ ಮಾಸದ ಬಗ್ಗೆ ಉಪನ್ಯಾಸ ನೀಡಿದರು.

ಪೆರ್ಲದ ಹೊಂಬೆಳಕು ಟ್ಯೂಷನ್ ಸೆಂಟರ್ ಪ್ರಾಂಶುಪಾಲ, ಜಾನಪದ ತಜ್ಞ ಡಾ.ಕಿಶೋರ್‌ಕುಮಾರ್ ರೈ ಶೇಣಿ ಉದ್ಘಾಟಿಸಿದರು. ಸಾಮಾಜಿಕ, ಧಾರ್ಮಿಕ ಮುಖಂಡ ಟಿ.ಪ್ರಸಾದ್ ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಪುರುಷೋತ್ತಮ ಪೆರ್ಲ, ಕಲಾಪೋಷಕ ಎಂ.ಆರ್.ಮಣಿ ಪೆರ್ಲ ಉಪಸ್ಥಿತರಿದ್ದರು. ನಾಟಿ ವೈದ್ಯೆ ನಳಿನಾಕ್ಷಿ ರೈ ಪೆರಿಯಾಲ್ ಹಾಗೂ ಶ್ರೀ ಮಹಮ್ಮಾಯಿ ಅಮ್ಮನವರ ಪಾತ್ರಿ ಐತ್ತಪ್ಪ ನಾಯ್ಕ ಬಜಕೂಡ್ಲು ಅವರನ್ನು ಸನ್ಮಾನಿಸಲಾಯಿತು. ಏಕದಂತ ಬಳಗದ ರಮೇಶ್ ಕುರಡ್ಕ ಸ್ವಾಗತಿಸಿ ನಿರೂಪಿಸಿದರು. ಜಯಂತ ಸೇರಾಜೆ ಪ್ರಾಸ್ತಾವಿಕ ಮಾತನಾಡಿದರು. ಸುಮಿತ್ರಾ ಕುರಡ್ಕ ವಂದಿಸಿದರು.

ಏಕದಂತ ಬಳಗದಿಂದ ಕುಣಿತ ಭಜನೆ, ನೃತ್ಯ ಕಾರ್ಯಕ್ರಮ ನಡೆಯಿತು. ಆಟಿ ಮಾಸದ ವಿಶೇಷ ತಿನಿಸುಗಳ ಪ್ರದರ್ಶನ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net