ರಸ್ತೆ ಕಾಮಗಾರಿಗೆ ಶಾಸಕ ಭೂಮಿಪೂಜೆ

10blrp2
Published on

ಬೇಲೂರು: ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅರೇಹಳ್ಳಿಯ ರಾಮನಗರದಲ್ಲಿ 30 ಲಕ್ಷ ರೂ. ಅನುದಾನದಲ್ಲಿ ಸಿಮೆಂಟ್ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.


ತಾಲೂಕಿನ ಅರೇಹಳ್ಳಿಯ ರಾಮನಗರದಲ್ಲಿ ಯಗಚಿ ಯೋಜನಾ ವಿಭಾಗದ ಎಸ್‌ಎಫ್‌ಸಿ ಅನುದಾನದಲ್ಲಿ ಸಿಮೆಂಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಾಕಷ್ಟು ದಿನಗಳಿಂದ ಇಲ್ಲಿನ ರಸ್ತೆ ಅಭಿವೃದ್ಧಿಗಾಗಿ ಜನರು ಮನವಿ ಮಾಡಿದ್ದರು. ಹಾಗಾಗಿ ಎಸ್‌ಎಫ್‌ಸಿ ಅನುದಾನದಲ್ಲಿ ಸಿಮೆಂಟ್ ರಸ್ತೆ, ಚರಂಡಿ ನಿರ್ಮಿಸಲಾಗುತ್ತಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಮುಂದಾಗಬೇಕು. ತಾಲೂಕಿನ ಮಲೆನಾಡು ಭಾಗದ ಪ್ರದೇಶಗಳಾದ ಕಸಬಾ ಹಾಗೂ ಅರೇಹಳ್ಳಿ ಹೋಬಳಿಯ ಸಾಕಷ್ಟು ಗ್ರಾಮಗಳಲ್ಲಿ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದರು.


ಅರೇಹಳ್ಳಿ ಗ್ರಾಪಂ ಅಧ್ಯಕ್ಷ ಸಂಕಪ್ಪ, ಉಪಾಧ್ಯಕ್ಷ ವಿಘ್ನೇಶ್, ಯಗಚಿ ಯೋಜನಾ ವಿಭಾಗದ ಸಹಾಯಕ ಇಂಜಿನಿಯರ್ ನವ್ಯಶ್ರೀ, ಮುಖಂಡರಾದ ಸೋಮನಾಥ್, ಚಂದ್ರಶೇಖರ್, ಅಶೋಕ್, ತೇಜ್‌ಪಾಲ್, ರೋಟರಿ ಶಾಲೆ ಮುಖ್ಯ ಶಿಕ್ಷಕಿ ತುಳಸಿ, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net