ಬೆಳ್ತಂಗಡಿಯಲ್ಲಿ ವಕೀಲರ ದಿನ

New Project (1)
Published on

ಬೆಳ್ತಂಗಡಿ: ಇಲ್ಲಿನ ವಕೀಲರ ಸಂಘ ಹಾಗೂ ಯುವ ವಕೀಲರ ವೇದಿಕೆ ನೇತೃತ್ವದಲ್ಲಿ ವಕೀಲರ ದಿನವನ್ನು ಮಂಗಳವಾರ ಆಚರಿಸಲಾಯಿತು. ಬೆಳ್ತಂಗಡಿಯ ಹಿರಿಯ ಶ್ರೇಣಿ ನ್ಯಾಯಾಧೀಶ ಮನು ಬಿ.ಕೆ, ಸಮಾಜದಲ್ಲಿ ವಕೀಲರ ಸ್ಥಾನಮಾನ, ನ್ಯಾಯಾಲಯ ಮತ್ತು ವಕೀಲ ನಡುವಿನ ಸಂಬಂಧದ ಬಗ್ಗೆ ತಿಳಿಸಿದರು.

ಹಿರಿಯ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮಾತನಾಡಿ, ಸಮಾಜಕ್ಕೆ ಮಾರ್ಗದರ್ಶನ ನೀಡುವ ಹಾಗೂ ಸಮಾಜದೊಂದಿಗೆ ಬೆರೆಯುವ ಅವಕಾಶವನ್ನು ವಕೀಲ ವೃತ್ತಿಯಲ್ಲಿ ನಾವು ಕಾಣಬಹುದಾಗಿದೆ ಎಂದರು.

ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಪಿ.ಸುಬ್ರಹ್ಮಣ್ಯ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ವಕೀಲರಿಗೆ ಆಯೋಜಿಸಲಾಗಿದ್ದ ಮನೋರಂಜನಾ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು.

ವಕೀಲರ ಹಿರಿಯ ಸಮಿತಿಯ ಅಧ್ಯಕ್ಷ ಅಲೋಶಿಯಸ್ ಎಸ್.ಲೋಬೊ, ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ. ಹಾಗೂ ಯುವ ವಕೀಲರ ವೇದಿಕೆಯ ಅಧ್ಯಕ್ಷ ಸಂದೀಪ್ ಡಿಸೋಜ, ಯುವ ವಕೀಲರ ವೇದಿಕೆಯ ಕಾರ್ಯದರ್ಶಿ ಜೋಸ್ನಾ ವೆಲೋನ ಕೊರೆಯ ಅಸ್ಮಾ, ಉಷಾ ಎನ್.ಜಿ. ಉಪಸ್ಥಿತರಿದ್ದರು. ಸೌಮ್ಯ ಸ್ವಾಗತಿಸಿದರು. ಜಿತೇಶ್ ವಂದಿಸಿದರು. ಯಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net