ಪಠ್ಯೇತರ ಚಟುವಟಿಕೆಗೆ ಪ್ರೇರಣೆ ಅವಶ್ಯ : ನಂದಳಿಕೆ ಸುಹಾಸ್ ಹೆಗ್ಡೆ ಅಭಿಮತ

New Project (25)
Published on

ಮೂಲ್ಕಿ: ಮಕ್ಕಳಲ್ಲಿ ಸಂಸ್ಕಾರಗಳನ್ನು ಬೆಳೆಸುವುದರ ಜತೆ ಜತೆಗೆ ಮಕ್ಕಳ ಭಾವನೆಗಳನ್ನು ಅರ್ಥ ಮಾಡಿ ಪಠ್ಯೇತರ ಚಟುವಟಿಕೆಗಳಿಗೂ ಪಾಲಕರು ಪ್ರೇರಣೆ ನೀಡಬೇಕಾಗಿದೆ ಎಂದು ಮೂಲ್ಕಿ ವಿಜಯಾ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ನಂದಳಿಕೆ ಸುಹಾಸ್ ಹೆಗ್ಡೆ ಹೇಳಿದರು.

ಮೂಲ್ಕಿ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ ಶಾಲೆಯಲ್ಲಿ ಪ್ರಾಥಮಿಕ ವಿಭಾಗದ 2024ನೇ ಸಾಲಿನ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಹಳೇ ವಿದ್ಯಾರ್ಥಿನಿ ವಾಲ್ವೊ ಟೆಕ್ನಾಲಜಿಸ್ ಅಸೋಸಿಯೇಟ್ ಇಂಜಿನಿಯರ್ ರುತ್ವಿಕಾ ಬಿ.ಮಾತನಾಡಿದರು. ಶಾಲಾ ಸಂಚಾಲಕ ಪಾಂಡುರಂಗ ಭಟ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠದ ಅಧ್ಯಕ್ಷ ಕೆ.ನರಸಿಂಹ ಪೈ, ಕಾರ್ಯದರ್ಶಿ ಎಚ್. ರಾಮದಾಸ್ ಕಾಮತ್ ಉಪಸ್ಥಿತರಿದ್ದರು.

ಪ್ರಾಂಶುಪಾಲೆ ಕಾಮಾಕ್ಷಿ ಆರ್.ನಾಯಕ್ ಶಾಲಾ ವಾರ್ಷಿಕ ವರದಿ ವಾಚಿಸಿದರು. ಸಹ ಶಿಕ್ಷಕಿಯರಾದ ಶ್ರೀ ಲಕ್ಷ್ಮಿಕಾಮತ್ ಹಾಗೂ ಅಮಿತಾ ಕೆ.ನಿರೂಪಿಸಿ. ಸಹ ಶಿಕ್ಷಕಿ ಮಲ್ಲಿಕಾ ಸ್ವಾಗತಿಸಿ. ಸಹ ಶಿಕ್ಷಕಿ ಜಯಲಕ್ಷ್ಮಿವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net