

ಬೆಂಗಳೂರು: ಕೈ-ಕಾಲುಗಳಿಗೆ ಬ್ಯಾಂಡೇಜ್ ಸುತ್ತಿಕೊಳ್ತಾರೆ.. ರೋಗಿಗಳಂತೆ ನಟಿಸುತ್ತಾರೆ.. ಅಯ್ಯೋ ಪಾಪ ಅಂತ ಅವರ ಸಹಾಯಕ್ಕೆ ಹೋದ್ರೆ ಕಿಡ್ನ್ಯಾಪ್ ಆಗ್ತೀರಿ ಜೋಕೆ!
ಹೌದು, ಹೀಗಂತ ಹೇಳೋಕು ಕಾರಣ ಇದೆ. ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ವಕೀಲರೊಬ್ಬರು ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಒಂದು ಗ್ಯಾಂಗ್ ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡು ಎದುರಿಗೆ ಬಂದಿತ್ತು. 'ಪ್ಲೀಸ್ ಸರ್.. ಹೆಲ್ಪ್ ಮಾಡಿ..' ಎಂದು ಬೇಡುತ್ತಾ ಕಾರನ್ನು ಅಡ್ಡಗಟ್ಟಿದ್ದರು. ವಕೀಲರು ಪಾಪ ಎನ್ನುತ್ತಾ ಸಹಾಯ ಮಾಡಲೆಂದು ಹೋಗುತ್ತಿದ್ದಂತೆ ಐನಾತಿ ಗ್ಯಾಂಗ್, ಗನ್ ತೋರಿಸಿ ವಕೀಲರನ್ನ ಕಿಡ್ನ್ಯಾಪ್ ಮಾಡಿತ್ತು. ಇದನ್ನೂ ಓದಿರಿ ಹಾಡಹಗಲೇ ಕೋರ್ಟ್ ಆವರಣದಲ್ಲಿ ವಕೀಲನ ಬರ್ಬರ ಕೊಲೆ! ಬೆಚ್ಚಿಬಿದ್ದ ಜನತೆ
ಬೆಂಗಳೂರಿಲ್ಲಿ ವಕೀಲರನ್ನ ಕಿಡ್ನ್ಯಾಪ್ ಮಾಡಿದ ಗ್ಯಾಂಗ್, ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಕರೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದೆ. ಲಾಯರ್ ಮೂಲಕ ಕುಟುಂಬಸ್ಥರಿಗೆ ಕರೆ ಮಾಡಿಸಿ 'ಆಕ್ಸಿಡೆಂಟ್ ಆಗಿದೆ, ಅರ್ಜೆಂಟ್ ಹಣ ಕಳುಹಿಸಿ' ಎಂದು ಹೇಳಿಸಿದ್ದಾರೆ. ಒಟ್ಟು 15,000 ಸಾವಿರ ಹಣ ಹಾಕಿಸಿಕೊಂಡಿದ್ದ ಆರೋಪಿಗಳು, ಮೊಬೈಲ್ ಕಿತ್ತುಕೊಂಡು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಘಟನೆ ಬಳಿಕ ಬನಶಂಕರಿ ಪೊಲೀಸ್ ಠಾಣೆಯಲ್ಲಿ ವಕೀಲರು ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ಟಿಪ್ಪು ಸುಲ್ತಾನ್, ಜಾಫರ್, ವಿಶಾಲ್, ದೀಪಕ್ ಮತ್ತು ನವೀನ್ ಬಂಧಿತರು.