ಕಾನೂನು ಅರಿವು ಆದ್ಯ ಕರ್ತವ್ಯ : ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ ಅಭಿಮತ

New Project (24)
Published on

ಮೂಲ್ಕಿ: ಸಾರ್ವಜನಿಕರಲ್ಲ್ಲಿ ಕಾನೂನು ಸಾಕ್ಷರತೆಮತ್ತು ಅರಿವನ್ನು ಹರಡಲು ಅದರಲ್ಲೂ ಸವಾಜದ ದುರ್ಬಲ ವರ್ಗಗಳಲ್ಲಿ ಸವಾಜ ಕಲ್ಯಾಣ ಕಾಯ್ದೆಗಳು, ಇತರೆ ಕಾನೂನುಗಳು ಮತ್ತು ಆಡಳಿತಾತ್ಮಕ ಕಾರ್ಯಕ್ರಮಗಳು ಹಾಗೂ ಕ್ರಮಗಳಿಂದ ಖಾತರಿಗೊಳಿಸಲ್ಪಟ್ಟ ಹಕ್ಕುಗಳು ಮತ್ತು ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದು ಆದ್ಯ ಕರ್ತವ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾಪ್ರಾಧಿಕಾರ ಸದಸ್ಯಕಾರ್ಯದರ್ಶಿ ಶೋಭಾ ಬಿ.ಜಿ. ಹೇಳಿದರು.

ಮೂಲ್ಕಿ ವಿಜಯ ಕಾಲೇಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು, ಹಳೆಯಂಗಡಿ ವಿಜಯ ವಾಸ್ಟರ್ ಟ್ರಸ್ಟ್ ಹಾಗೂ ಭಾರತದ ಕಾನೂನು ನೆರವು ಟಕ ಹಳೆಯಂಗಡಿ ಸಹಯೋಗದಲ್ಲಿ ಕಾನೂನು ವಾಹಿತಿ ಶಿಬಿರ ಉದ್ಘಾಟಿಸಿ ಇತ್ತೀಚೆಗೆ ವಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಭಾರತದ ಕಾನೂನು ನೆರವು ಟಕ ಅಧ್ಯಕ್ಷ ಡೇನಿಯಲ್ ದೇವರಾಜ್ ವಾತನಾಡಿ, ಸವಾಜದ ದುರ್ಬಲ ವರ್ಗಗಳಿಗೆ ನ್ಯಾಯ ಪಡೆಯುವ ಅವಕಾಶ ತಪ್ಪಿ ಹೋಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಕಾನೂನು ಸೇವೆಗಳ ಪ್ರಾಧಿಕಾರಗಳಿಗೆ ನೀಡಲಾಗಿದ್ದು, ಜನ ಸಾವಾನ್ಯರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಮೂಲ್ಕಿ ವಿಜಯಾ ಕಾಲೇಜು ಪ್ರಾಂಶುಪಾಲ ಪ್ರೊ.ವೆಂಕಟೇಶ್ ಭಟ್, ಪ್ರಮುಖರಾದ ಸ್ಟೀವನ್ ಸರ್ವೊತ್ತಮ, ಎಂ.ಸುಬ್ರಾಯ ಪ್ರಭು, ಡಾ.ಶೈಲಜಾ ವೈ., ಪ್ರತೀಕ್ಷಾ, ಗುರುದತ್ತ ಪೈ, ಸ್ವಾತಿ ಮೊದಲಾದವರಿದ್ದರು.

ವಿದ್ಯಾರ್ಥಿ ನಾಯಕ ಚೇತನ್ ಸ್ವಾಗತಿಸಿದರು. ಚೈತ್ರಾ ನಿರೂಪಿಸಿದರು. ಮೋಹಿತಾ ವಂದಿಸಿದರು.

ವಿವಿಧ ಕಾಯ್ದೆಗಳ ವಿಚಾರ ಮಂಡನೆ

ಮೂಲ್ಕಿ ಠಾಣಾ ಎ.ಎಸ್.ಐ. ಹರಿಶೇಖರ್ ಎಸ್., ಹೆಣ್ಣು ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ಸಂರಕ್ಷಿಸುವ ಕಾಯ್ದೆ ಬಗ್ಗೆ ವಾಹಿತಿ ನೀಡಿದರು.

ಕಂಕನಾಡಿ ಫಾದರ್ ಮುಲ್ಲರ್ಸ್‌ ಆಸ್ಪತ್ರೆ ಮನೋವೈದ್ಯಕೀಯ ಆಪ್ತಸವಾಲೋಚಕ ಶ್ರೀಪತಿ ಭಟ್ ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆಯಲು ಸಂತ್ರಸ್ತ ಮಕ್ಕಳ ಹೆತ್ತವರು, ಶಾಲೆಯ ಮುಖ್ಯಸ್ಥರ ಮನೋವೈದ್ಯಕೀಯ ಕಾನೂನು ವಾಹಿತಿ ನೀಡಿದರು. ಮಂಗಳೂರಿನ ವಕೀಲ ಶಶಿಕುವಾರ್, ಸೈಬರ್ ಕ್ರೈಮ್ ಬಗ್ಗೆ ಕಾನೂನು ವಾಹಿತಿ ನೀಡಿದರು. ಮೂಲ್ಕಿ ಉಪನೋಂದಣಾಧಿಕಾರಿ ರಾಜೇಶ್ವರಿ ಆನ್‌ಲೈನ್ ವಿವಾಹ ನೋಂದಣಿ ಬಗ್ಗೆ ಕಾನೂನು ವಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net