ಕಾನೂನು ಪುಸ್ತಕ, ಲ್ಯಾಪ್‌ಟಾಪ್ ಒದಗಿಸಿ

Published on

ಕಂಪ್ಲಿ: ಎಸ್‌ಸಿಎಸ್‌ಪಿ, ಟಿಎಸ್‌ಪಿ ಕ್ರಿಯಾಯೋಜನೆಯಲ್ಲಿ ಎಸ್ಸಿ, ಎಸ್ಟಿ ಸಮುದಾಯದ ವೃತ್ತಿನಿರತ ವಕೀಲರಿಗೆ ಕಾನೂನು ಪುಸ್ತಕ ಲ್ಯಾಪ್‌ಟಾಪ್ ಒದಗಿಸುವಂತೆ ಒತ್ತಾಯಿಸಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ(ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಮಾಜಿ ಸದಸ್ಯ ಮೋಹನ್‌ಕುಮಾರ್ ದಾನಪ್ಪ ಸೋಮವಾರ ಪುರಸಭೆ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಸಾಮಾಜಿಕ ಸಮಸ್ಯೆಗಳ ಮಧ್ಯೆಯೂ ಎಸ್ಸಿ, ಎಸ್ಟಿ ಯುವ ಜನತೆ ಶಿಕ್ಷಣದ ಕಡೆ ಒಲವು ತೋರಿ ಕಾನೂನು ಶಿಕ್ಷಣ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ವಕೀಲ ವೃತ್ತಿ ಮಾಡುತ್ತಿದ್ದಾರೆ. ಇವರಿಗೆ ಬದಲಾದ ಕಾನೂನುಗಳು,

ನ್ಯಾಯಾಂಗದ ಕಲಿಕೆಯಲ್ಲಿ ಆಧುನೀಕರಣ ಮತ್ತು ತಾಂತ್ರಿಕ ಕ್ರಮಗಳ ಅನುಸರಣೆಗಾಗಿ ನ್ಯಾಯಾಲಯದ ದಾಖಲೆಗಳನ್ನು ಡಿಜಿಟಲೀಕರಣ, ಆನ್‌ಲೈನ್‌ನಲ್ಲಿ ಪ್ರಕರಣಗಳನ್ನು ಸಲ್ಲಿಸುವುದು ಮತ್ತು ಇ-ಕೋರ್ಟ್ ಸೇವೆ ಸೇರಿ ಹಲವಾರು ಬದಲಾವಣೆಗಳನ್ನು ಅರಿತು ಅಳವಡಿಸಿಕೊಳ್ಳಲು ಸಾಧನೋಪಕರಣಗಳ ಅಗತ್ಯವಿದೆ.

ಪುರಸಭೆ ವ್ಯಾಪ್ತಿಗೊಳಪಟ್ಟ ಎಸ್ಸಿ, ಎಸ್ಟಿ ಸಮುದಾಯಕ್ಕೆ ವೃತ್ತಿನಿರತ ವಕೀಲರಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಕ್ರಿಯಾ ಯೋಜನೆಯಡಿಯಲ್ಲಿ ತಲಾ ಒಂದು ಲಕ್ಷ ರೂ.ವೆಚ್ಚದ ಕಾನೂನು ಪುಸ್ತಕಗಳನ್ನು, ಲ್ಯಾಪ್‌ಟಾಪ್ ಒದಗಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net