

ಕಟಕೋಳ: ಪ್ರಸ್ತುತ ದಿನಗಳಲ್ಲಿ ಕಾನೂನಿನ ಪರಿಜ್ಞಾನ ಇಲ್ಲದಿದ್ದರೂ ಅನರಸ್ಥರು ಸನ್ಮಾರ್ಗದಲ್ಲಿ ಸಾಗುತ್ತಿದ್ದಾರೆ. ಆದರೆ, ವಿದ್ಯಾವಂತರಿಂದ ಕಾನೂನು ಹೆಚ್ಚು ದುರ್ಬಳಕೆಯಾಗುತ್ತಿದೆ ಎಂದು ಕಟಕೋಳ ಮುದಕವಿ ವಿರಕ್ತಮಠದ ಸಚ್ಚಿದಾನಂದ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಗ್ರಾಮದ ಎಸ್ಎಸ್ಎಸ್ವಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಂಪ್ರದಾಯಿಕ ಉಡುಗೆ& ತೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿಪಿಐ ಐ.ಆರ್.ಪಟ್ಟಣಶೆಟ್ಟಿ ಮಾತಾನಾಡಿ, ವಿದ್ಯಾರ್ಥಿಗಳು ಸಂಸತಿ, ಪರಂಪರೆ ಮೈಗೂಡಿಸಕೊಳ್ಳಬೇಕು ಎಂದರು. ಆಡಳಿತಾಧಿಕಾರಿ ಡಾ.ಪಿ.ಕೆ.ರಾಠೋಡ, ಸಮಿತಿ ಅಧ್ಯ ಎ.ಸಿ ಸುರಗ ಮಾತನಾಡಿದರು.
ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ಧರಿಸಿ ಗಮನ ಸೆಳೆದರು. ಉಪಾಧ್ಯ ಎನ್.ಬಿ.ತೋಡಕರ, ಗೌರವ ಕಾರ್ಯದರ್ಶಿ ಸಿ.ಬಿ.ಕಳಸಪ್ಪನವರ ನಿರ್ದೇಶಕ ಸಿ.ಎ.ದೇಸಾಯಿ ಎಂ.ಎಂ.ಆತಾರ, ಎಸ್.ಬಿ.ಕಳಸಪ್ಪನವರ, ಪ್ರಾಚಾರ್ಯ ಎನ್.ಎಂ. ಜಾಲಿಮರದ ಇತರರಿದ್ದರು. ಪ್ರೊ.ಎಚ್.ಬಿ.ಯರಗಟ್ಟಿ ನಿರೂಪಿಸಿದರು. ಎಸ್.ಎಂ.ಕಡಕೋಳ ಸ್ವಾಗತಿಸಿದರು. ಎಸ್.ಬಿ ನರಗುಂದ ವಂದಿಸಿದರು.