ಅದ್ದೂರಿ ಹೋಳಿ ಆಚರಣೆಗೆ ನಿರ್ಧಾರ

HOLI
Published on

ರಾಮದುರ್ಗ: ಪಟ್ಟಣದ ರಾಧಾಪುರ ಪೇಟೆಯ ದೇವಾಂಗ ಸಮುದಾಯದ ನೇತೃತ್ವದಲ್ಲಿ ಮಾ.11ರಿಂದ ಮಾ.15ರ ವರೆಗೆ 14ನೇ ವರ್ಷದ ಹೋಳಿ ಹಬ್ಬದ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.

ರಾಧಾಪುರ ಪೇಟೆಯ ಶ್ರೀಬನಶಂಕರಿ ಹಾಗೂ ಶ್ರೀದೇವಲ ಮಹರ್ಷಿ ದೇವಸ್ಥಾನದಲ್ಲಿ ಶುಕ್ರವಾರ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಮಾ. 11ರಂದು ಸಂಜೆ 6 ಗಂಟೆಗೆ ರತಿ ಕಾಮಣ್ಣರ ಮೂರ್ತಿ ಮೆರವಣಿಗೆ ಹಾಗೂ ಪ್ರತಿಷ್ಠಾಪನೆ, ಮಾ.12ರಂದು ಸಂಜೆ 7 ಗಂಟೆಗೆ ಉದ್ಘಾಟನಾ ಸಮಾರಂಭ ಹಾಗೂ ಚಿಕ್ಕ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ.

ಮಾ.13, 14ರಂದು ಸಂಜೆ 6 ಗಂಟೆಗೆ ಸಾಂಸತಿಕ ಕಾರ್ಯಕ್ರಮ. ಮಾ.15ರಂದು ಬೆಳಗ್ಗೆ ರತಿ ಕಾಮಣ್ಣರ ಮೂರ್ತಿ ಮೆರವಣಿಗೆ ನಂತರ ಕಾಮದಹನ ಕಾರ್ಯಕ್ರಮ ಜರುಗುವ ಕುರಿತು ಚರ್ಚಿಸಲಾಯಿತು.

ಕುಬೇರ ಗರಡಿಮನಿ, ನಾರಾಯಣ ಹೂಲಿ, ವಿಷ್ಣು ಸೂಳಿಭಾಂವಿ, ನೀಲಕಂಠ ಂಟಿ, ನಾಗಪ್ಪ ಶಿನ್ನೂರ, ರವಿ ಬಸರಗಿ, ನಾಮದೇವ ಕುದರಿ, ಶಂಕರ ಕರಿಚನ್ನವರ, ಶಂಕರ ಹೂಲಿ, ದಯಾನಂದ ಕಳ್ಳಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net