ಮಳವಳ್ಳಿ ಅಲಯನ್ಸ್ ಸಂಸ್ಥೆಯ ಘಟಕಕ್ಕೆ ಚಾಲನೆ

10 mlv4
Published on

ಮಳವಳ್ಳಿ: ಮಳವಳ್ಳಿ ತಾಲೂಕು ವಡಿಕೆಪುರ ಗ್ರಾಮದ ಪಾಂಚಜನ್ಯ ಫಾರ್ಮ್ ಹೌಸ್ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲೆ 268 ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ನೂತನ ಮಳವಳ್ಳಿ ಅಲಯನ್ಸ್ ಸಂಸ್ಥೆಯ ಘಟಕಕ್ಕೆ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯು ಲಾಭ ರಹಿತ ರಾಜಕೀಯ ಸಹಕಾರ ಸೇವಾ ಸಂಸ್ಥೆಯಾಗಿದೆ. ಇದರ ಮುಖ್ಯ ಉದ್ದೇಶ ಸ್ನೇಹ ಮತ್ತು ಸೇವಾ ಕಾರ್ಯವಾಗಿದೆ. ಸಂಸ್ಥೆಯು 2008 ರಲ್ಲಿ ಪ್ರಾರಂಭವಾಗಿ ಪ್ರಸ್ತುತ 32 ದೇಶಗಳಲ್ಲಿ 2 ಸಾವಿರಕ್ಕೂ ಹೆಚ್ಚು ಶಾಖೆಗಳು ಹಾಗೂ 2 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡು ವೇಗವಾಗಿ ಬೆಳೆಯುತ್ತಿದೆ. ಸಂಸ್ಥೆಯ ಮುಖ್ಯ ಕಾರ್ಯಕ್ರಮಗಳು ಅಗತ್ಯವಿರುವವರಿಗೆ ಸಹಾಯ ಮಾಡುವುದು. ಜನರ ದೃಷ್ಟಿ ಸುಧಾರಣೆ, ಕ್ಯಾನ್ಸರ್ ಪೀಡಿತರಿಗೆ ಸಹಾಯ ಹಸ್ತ ಹಾಗೂ ಪರಿಸರ ಸಂರಕ್ಷಣೆ, ಸರ್ಕಾರಿ ಶಾಲೆಗಳ ಸಬಲೀಕರಣ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಒದಗಿಸುವುದಾಗಿದೆ ಎಂದು ಮಾಹಿತಿ ನೀಡಿದರು. ಹಾಗಾಗಿ ಹೆಚ್ಚು ಹೆಚ್ಚು ಜನರು ಈ ಸಂಸ್ಥೆಯ ಸದಸ್ಯರಾಗಿ ಸೇರುವುದರ ಮೂಲಕ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಾಂತಪಾಲ ಎಚ್.ಮಾದೇಗೌಡ ನೂತನ ಅಧ್ಯಕ್ಷ ಎಸ್.ಕೆ.ರವೀಂದ್ರ ಹಾಗೂ ಸದಸ್ಯರು ಮತ್ತು ಪದಾಧಿಕಾರಿಗಳಿಗೆ ಅಲಯನ್ಸ್ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಕೆ.ಆರ್.ಶಶಿಧರ, ಕೆ .ಎಸ್. ಚಂದ್ರಶೇಖರ್, ಪ್ರೊ.ಡೇವಿಡ್, ವಿ.ಎಸ್.ನಾಗರಾಜು, ಸಂಪುಟ ಖಜಾಂಚಿ ಆರ್.ಮಹೇಶ್, ಉಪಾಧ್ಯಕ್ಷ ಬಿ.ಪುಟ್ಟಸ್ವಾಮಿ, ಕಾರ್ಯದರ್ಶಿ ಬಸವಲಿಂಗೇಗೌಡ, ಖಜಾಂಚಿ ಮರಿಸ್ವಾಮಿ, ಕ್ಲಬ್ ಸದಸ್ಯರು, ಪದಾಧಿಕಾರಿಗಳು ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net