ಹೊಸ ಫೀಡರ್‌ಗೆ ಚಾಲನೆ

New Project (7)
Published on

ಬೆಳ್ತಂಗಡಿ : ಬಳ್ಳಮಂಜ, ಮಚ್ಚಿನ, ಪಾರೆಂಕಿ ಗ್ರಾಮದ ಮಾರಿಗುಡಿಯವರೆಗೆ ಹೊಸ ಫೀಡರ್‌ಗೆ ಕಲ್ಲೇರಿ ವಿದ್ಯುತ್ ಸರ್ವೀಸ್ ಸ್ಟೇಷನ್‌ನಿಂದ ಚಾಲನೆ ನೀಡಲಾಯಿತು.

ಮಚ್ಚಿನ ಗ್ರಾಮ ವ್ಯಾಪ್ತಿಯ ಕಾರಂದೂರು ಫೀಡರ್‌ನಿಂದ ಬೆರ್ಬಾಲಾಜೆ, ಪಾಲಡ್ಕ, ಬಳ್ಳಮಂಜ, ದೇವರಗುಂಡಿ, ಕುತ್ತಿನ, ಬಂಗೇರಕಟ್ಟೆ, ಪಾರೆಂಕಿ ಗ್ರಾಮದ ವ್ಯಾಪ್ತಿಯ ಅಮ್ಡಾಲ್, ನೆತ್ತರ, ಸಾಲ್ಮರ, ಮಾರಿಗುಡಿಯವರೆಗೆ ಸಂಪರ್ಕ ನೀಡಲಾಗಿದೆ. ಕಲ್ಲೇರಿ ಕೆಪಿಟಿಸಿಎಲ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವಿನಾಶ್, ಮಡಂತ್ಯಾರು ಮೆಸ್ಕಾಂ ಶಾಖಾಧಿಕಾರಿ ಸಂತೋಷ್ ನಾಯ್ಕ, ಕಕ್ಕೆಪದವು ಮೆಸ್ಕಾಂ ಶಾಖಾಧಿಕಾರಿ ಮನೋಜ್, ಮಡಂತ್ಯಾರು ಶಾಖೆ ಪವರ್ ಮ್ಯಾನ್‌ಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net