

ಕೋಟ: ಪಂಚವರ್ಣ ಮಹಿಳಾ ಮಂಡಲ ಭಜನಾ ತಂಡ ಹಾಗೂ ಸ್ನೇಹಕೂಟ ಆಶ್ರಯದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇಗುಲ ಸಮಿತಿ ವತಿಯಿಂದ ಲೋಕಕಲ್ಯಾಣಾರ್ಥ ಹಾಗೂ ಪ್ರಾಕೃತಿಕ ವಿಕೋಪ ತಡೆಗಾಗಿ ಜ.26ರಂದು ಕಾಸಗೂಡಿನಿಂದ ಬೈಂದೂರಾಗಿ ಶಿರೂರಿನ ತನಕ ವಿಷ್ಣು ಸಹಸ್ರನಾಮ ಪಠಣದ ಅಭಿಯಾನ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಎಚ್ ಕುಂದರ್ ಉದ್ಘಾಟಿಸಿದರು.
ಸ್ನೇಹಕೂಟದ ಸಂಚಾಲಕಿ ಭಾರತಿ ವಿ.ಮಯ್ಯ ಪ್ರಸ್ತಾವನೆಗೈದರು. ಅಭಿಯಾನದ ಉಡುಪಿ ಜಿಲ್ಲಾ ಸಂಯೋಜಕಿ ರಶ್ಮಿರಾಜ್ ಕುಂದಾಪುರ ಮೂರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪ್ರಮುಖರಾದ ವಿಷ್ಣುಮೂರ್ತಿ ಮಯ್ಯ, ರಾಜೇಂದ್ರ ಉರಾಳ, ಗೀತಾ ಪೂಜಾರಿ ಹಾಡಿಕೆರೆ, ಲಲಿತಾ ಪೂಜಾರಿ, ಅಜಿತ್ ಆಚಾರ್, ಮನೋಹರ್ ಪೂಜಾರಿ ಉಪಸ್ಥಿತರಿದ್ದರು. ಸುಜಾತ ಬಾಯರಿ ನಿರೂಪಿಸಿದರು. ರವೀಂದ್ರ ಕೋಟ ಸಂಯೋಜಿಸಿದರು.