ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ ಅಂಗಡಿ ತಾಯಿ ವಿಧಿವಶ

Suresh Angadi
Published on

ಬೆಳಗಾವಿ: ಕೇಂದ್ರದ ಮಾಜಿ ಸಚಿವ ದಿವಂಗತ ಸುರೇಶ ಅಂಗಡಿ ಅವರ ತಾಯಿ ಗುರುವಾರ ವಿಧಿವಶರಾಗಿದ್ದಾರೆ.

ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದಲ್ಲಿ ಸೋಮವ್ವ ಅಂಗಡಿ ( 92) ವಿಧಿವಶರಾಗಿದ್ದಾರೆ.

ಕರೊನಾ ಸೋಂಕಿನಿಂದ ದಿ. ಸುರೇಶ ಅಂಗಡಿ ‌ಮೃತಪಟ್ಟು ಮಾರ್ಚ್ 23ಕ್ಕೆ 6 ತಿಂಗಳ ಪೂರ್ಣಗಳ್ಳಲಿದೆ. ಇದೀಗ ಅವರ ತಾಯಿ ಮೃತಪಟ್ಟಿದ್ದರಿಂದ ಅಂಗಡಿ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಇಂದು ಸಂಜೆ ಸ್ವಗ್ರಾಮ ಕೆಕೆ ಕೊಪ್ಪ ನಾಗರಹಾಳದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

2020ರ ಸೆಪ್ಟೆಂಬರ್​ 23ರಂದು ಸಚಿವ ಸುರೇಶ್​ ಅಂಗಡಿಯವರು ದೆಹಲಿಯ ಏಮ್ಸ್​ನಲ್ಲಿ ನಿಧನರಾದರು. ಅಂಗಡಿಯವರಿಗೆ ಸೆಪ್ಟೆಂಬರ್​ 11ರಂದು ಕರೊನಾ ದೃಢಪಟ್ಟಿತ್ತು. ಯಾವುದೇ ರೋಗ ಲಕ್ಷಣಗಳಿಲ್ಲದೇ ಕರೊನಾ ಪಾಸಿಟಿವ್​ ವರದಿಯಾಗಿತ್ತು. ಕರೊನಾ ಹಿನ್ನೆಲೆಯಲ್ಲಿ ಅವರ ಅಂತ್ಯಕ್ರಿಯೆಯನ್ನು ದೆಹಲಿಯಲ್ಲಿ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net