ಕೊನೆಯ ದಿನ 25 ಅಭ್ಯರ್ಥಿಗಳಿಂದ 28 ನಾಮಪತ್ರ ಸಲ್ಲಿಕೆ

ನಾಮಪತ್ರ ಸಲ್ಲಿಕೆ (4)
Published on

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯ ನಾಮಪತ್ರಗಳ ಸಲ್ಲಿಕೆ ಕೊನೆಯ ದಿನವಾದ ಶುಕ್ರವಾರ 25 ಅಭ್ಯರ್ಥಿಗಳಿಂದ 28 ನಾಮಪತ್ರಗಳು ಸಲ್ಲಿಕೆ ಆಗಿವೆ.

‘ಎನ್ ಡಿಎ ಮೈತ್ರಿ ಕೂಟದ ಅಭ್ಯರ್ಥಿಯಾಗಿ ನಿಖಿಲ್ ಕೆ ನಾಮಪತ್ರ ಸಲ್ಲಿಕೆ ಮಾಡಿದ ಪ್ರಮುಖರು. ಉಳಿದಂತೆ   ಉತ್ತಮ ಪ್ರಜಾಕೀಯ ಪಾರ್ಟಿ ಅಭ್ಯರ್ಥಿ ಅಭೀಷೇಕ್ ಎಸ್.,  ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಬಂಡಿ ರಂಗನಾಥ್ ವೈ.ಆರ್., ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಮೊಹಮ್ಮದ್ ಫಾಜಿಲ್,   ರೈತ ಭಾರತ ಪಕ್ಷದ ಅಭ್ಯರ್ಥಿ ನಾಗೇಶ್ ಕೆ.ಜೆ. ವಿಜಯ ಜನತಾ ಪಾರ್ಟಿ ಅಭ್ಯರ್ಥಿ ಶ್ರೀಧರ್ ಎನ್.ಎಸ್. ,ಅಂದಾನಯ್ಯ,  ಬಿ.ಆರ್ ಕೃಷ್ಣೇಗೌಡ, ಸಿ.ಎಂ. ಮಂಜುನಾಥಯ್ಯ ಸ್ವಾಮಿ, ರಾಮಯ್ಯ ಡಿ., ಶ್ರೀನಿವಾಸ ಎಸ್.ಎಚ್, ನಿಂಗರಾಜ್ ಎಸ್. ಜಯಮಾಲ, ಚಿಕ್ಕಯ್ಯ  ಎನ್. ಅಂಬರೀಶ್, ಬಿ.ಸಿ. ದಿನೇಶ್ , ಇಮ್ಯಾನ್ ವೆಲ್  ಡಿ.ಎಂ. ಮಾದೇಗೌಡ, ಸೈಯದ್ ಜುಲ್ಫಿಕರ್ ಮೆಹದಿ, ಮಂಜುನಾಥ್, ಪ್ರಸನ್ನ ಡಿ, ಅಶ್ವಥ್ ಪಿ, ರಾಜು ಕೆ., ಹನುಮಂತಯ್ಯ, ಶ್ರೀಕಾಂತ್ ಕೆ.  ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ ಮಾಡಿದರು.

ಅಕ್ಟೋಬರ್ 19ರಂದು  ಯಂಗ್‌ಸ್ಟಾರ್ ಎಂಪವರ್ಮೆಂಟ್ ಪಾರ್ಟಿಯ ಅಭ್ಯರ್ಥಿಯಾಗಿ ಶಾಬಾಜ್‌ಉಲ್ಲಾ ಖಾನ್ , ಅ.21ರಂದು  ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೇಮ್‌ಕುಮಾರ್ ಕೆ., ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮಾ ವಿ, ಪಕ್ಷೇತರ ಅಭ್ಯರ್ಥಿ ಸೈಯದ್ ಆಸಿಫ್ ಬುಕಾರಿ, ಅ.22ರಂದು  ಪಕ್ಷೇತರ ಅಭ್ಯರ್ಥಿ ರವಿ ಶಿವಪ್ಪ ಪಡಸಲಗಿ, ಪಕ್ಷೇತರ ಅಭ್ಯರ್ಥಿ ಜೆ.ಟಿ. ಪ್ರಕಾಶ್, ಅ.23ರಂದು ಪಕ್ಷೇತರ ಅಭ್ಯರ್ಥಿ ಭಾಸ್ಕರ್ ಎ.ಎಸ್, ಪಕ್ಷೇತರ ಅಭ್ಯರ್ಥಿ ಪ್ರದೀಪ್ ಕುಮಾರ್ ಎಂ., ಚನ್ನನಾಗೇಶ್ ನಾಮಪತ್ರ ಸಲ್ಲಿಸಿದ್ದಾರೆ .

ಅ.24ರಂದು  ಸಿ.ಪಿ.ಯೋಗೇಶ್ವರ್​ ಕಾಂಗ್ರೆಸ್​ನಿಂದ ಉಮೇದುವಾರಿಕೆ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಪ್ರದೀಪ್ ಟಿ.ವಿ, ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಎಸ್. ಶಿವಕುಮಾರ್, ಪೂರ್ವಾಚಲ್ ಮಹಾ ಪಂಚಾಯತ್ ಪಕ್ಷದ ಅಭ್ಯರ್ಥಿ ಎಚ್.ಡಿ. ರೇವಣ್ಣ, ಕಂಟ್ರಿ ಸಿಟಿಜನ್ ಪಾರ್ಟಿ ಅಭ್ಯರ್ಥಿ ಜೆ.ಟಿ. ಪ್ರಕಾಶ್, ಪಕ್ಷೇತರ ಅಭ್ಯರ್ಥಿಗಳಾದ ಚಿಕ್ಕ ಸಿದ್ದಯ್ಯ, ರಮೇಶ್ ಎಚ್.ಆರ್., ಅರವಿಂದ್, ಯೋಗೇಶ್, ಎಂ.ಎಸ್.ಯೋಗೇಶ್, ಡಾ. ಚಂದ್ರೇಗೌಡ ಎಚ್.ಎಸ್, ಅನಿಲ್ ಕುಮಾರ್ ಎಂ., ಕುಮಾರ ಸ್ವಾಮಿ, ನಿಂಗರಾಜ್ ಜಿ., ಶ್ರೀನಿವಾಸ ಮೂರ್ತಿ ಎಚ್.ಕೆ., ಮಹದೇವ ಸ್ವಾಮಿ ಬಿ.ಎಂ. ಹಾಗೂ ಎಚ್.ಪಿ. ನಂಜೇಗೌಡ ತಲಾ ಒಂದು ನಾಮಪತ್ರ ಸಲ್ಲಿಸಿರುತ್ತಾರೆ ಎಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net