ಅರ್ಜಿ ಪಡೆಯಲು ಮೇ 10 ಕೊನೇ ದಿನ

Published on

ಪಡುಬಿದ್ರಿ: ಸರ್ಕಾರದ ಆದೇಶದನ್ವಯ ಕಾಪು ಪುರಸಭೆ ವ್ಯಾಪ್ತಿಯ ಕಟ್ಟಡ / ನಿವೇಶನಗಳಿಗೆ ಆಸ್ತಿ ತೆರಿಗೆ ನಿಗದಿಗೊಳಿಸಿ ಜತೆಗೆ 2024-25ನೇ ಸಾಲಿನ ಅಂತ್ಯ ತನಕದ ಪೂರ್ತಿ ಆಸ್ತಿ ತೆರಿಗೆ ಪಾವತಿಸಬೇಕು. ಇದಕ್ಕಾಗಿ ದಾಖಲೆಗಳನ್ನು ಅರ್ಜಿ ನಮೂನೆ 3 ಹಾಗೂ ನಮೂನೆ 3 ಎ ವಿಭಾಗದಲ್ಲಿ ಸಲ್ಲಿಸಲು ಆಸ್ತಿ ಮಾಲೀಕರಿಗೆ ಅವಕಾಶ ಕಲ್ಪಿಸಲಾಗಿದೆ. ನಮೂನೆ 3ರಲ್ಲಿ ಅಧಿಕೃತ ಸೊತ್ತುಗಳ ವಿವರ ಹಾಗೂ ನಮೂನೆ 3 (ಎ)ನಲ್ಲಿ ಅನಧಿಕೃತ ಸ್ವತ್ತುಗಳ ದಾಖಲೆಗಳನ್ನು ಸಲ್ಲಿಸಬೇಕು. ನಮೂನೆಗಳನ್ನು ಮೇ.10ರ ಒಳಗೆ ಪಡೆಯಬೇಕಿದ್ದು, ಖಾಸಗಿ ಕಟ್ಟಡ, ನಿವೇಶನಗಳ ಮಾಲೀಕರು ವಿದ್ಯುತ್ ಬಿಲ್, ಕಟ್ಟಡ ಪರವಾನಗಿ, ಕನ್ವರ್ಷನ್ ಪತ್ರ ಅಥವಾ ಆರ್‌ಟಿಸಿ, ಬಡಾವಣೆ ನಕ್ಷೆ ಹಾಗೂ ತಮ್ಮ ಪಾನ್‌ಕಾರ್ಡ್ ಸಹಿತ ಪ್ರಮುಖ ದಾಖಲೆಗಳನ್ನು ಪುರಸಭೆ ಕಚೇರಿಗೆ ಸಲ್ಲಿಸಬೇಕಿದೆ. ನಮೂನೆ 3(ಎ) ಪಡೆಯಲು 2024ರ ಸೆ.10ರ ಮೊದಲು ನೋಂದಾಯಿತ ದಾಖಲೆ ಪತ್ರಗಳನ್ನು ಸಲ್ಲಿಸಬಹುದು. ಮಾಹಿತಿಗೆ ಸಹಾಯವಾಣಿ ಸಂಖ್ಯೆ 0820 2551061 ಅಥವಾ ಕಚೇರಿಯ ಕಂದಾಯ ವಿಭಾಗ ಸಂಪರ್ಕಿಸುವಂತೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net