​'ಲಂಗೋಟಿ ಮ್ಯಾನ್​'ನಲ್ಲಿ ಬ್ರಾಹ್ಮಣರಿಗೆ ಅವಮಾನ; ಡಾ.ಶಂಕರಗುಹಾ ದ್ವಾರಕಾನಾಥ್​ ಟೀಕೆ

Shankar
Published on

ಬೆಂಗಳೂರು: ಇತ್ತೀಚೆಗೆ ಬಿಡುಗಡೆಗೊಂಡಿರುವ 'ಲಂಗೋಟಿ ಮ್ಯಾನ್​' ಕನ್ನಡ ಸಿನಿಮಾದ ಟೀಸರ್​ ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದೆ. ಈ ಕುರಿತು ಡಾ.ಶಂಕರ್​ ಗುಹಾ ದ್ವಾರಕಾನಾಥ್​ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ್ದು, ಯಾವುದೇ ಜಾತಿ ಹಾಗೂ ವರ್ಗದವರನ್ನು ನಿಂದಿಸುವುದು ತಪ್ಪು. ಸಂವಿಧಾನಾತ್ಮಕವಾಗಿ ಎಲ್ಲರಿಗೂ ಅವರ ಮೂಲಭೂತ ಹಕ್ಕುಗಳನ್ನು ಚಲಾಯಿಸುವ ಅಧಿಕಾರ ಇರುತ್ತದೆ.

ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರು ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ತಪ್ಪನ್ನು ಸರಿಪಡಿಸಿ, ಕ್ಷಮೆಯಾಚಿಸಬೇಕು. ತಪ್ಪಿದಲ್ಲಿ ಅರ್ಚಕರ ಸಂಘದೊಂದಿಗೆ ಹೋರಾಟ ಮಾಡಬೇಕಾದಂತ ಪರಿಸ್ಥಿತಿ ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಒಬ್ಬ ಮನುಷ್ಯ ಜನಿವಾರ ಹಾಕಿ, ಕೇವಲ ಲಂಗೋಟಿಯಲ್ಲಿ ಓಡುತ್ತಿರುವ ಹಾಗೆ ಚಿತ್ರೀಕರಣ ಮಾಡಿರುವುದು ಟೀಸರ್​ನಲ್ಲಿ ಕಂಡುಬಂದಿದೆ. ಈ ಮೂಲಕ ಬ್ರಾಹ್ಮಣರನ್ನು ಹಾಗೂ ಬ್ರಾಹ್ಮಣರ ಪಾರಂಪರಿಕ ವಸದಾರವನ್ನು ಟೀಕಿಸಿ, ಪುರೋಹಿತ ವರ್ಗಕ್ಕೆ ಹಾಗೂ ಬ್ರಾಹ್ಮಣರನ್ನು ಅಪಹಾಸ್ಯ ಮಾಡುವ ಪ್ರಯತ್ನ ನಡೆದಿದೆ' ಎಂದು ಪುರೋಹಿತ ಸಂಘದ ಅಧ್ಯಕ್ಷ ರಾಘವೇಂದ್ರ ಆರೋಪಿಸಿದ್ದಾರೆ. ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಿಗೆ ಈ ವಿಷಯ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net