ಗುಡ್ಡ ಜರಿದು ಬಿದ್ದು ಮನೆಗೆ ಹಾನಿ

gudda
ಹುಕ್ರಪ್ಪ ಮನೆಗೆ ಗುಡ್ದ ಜರಿದು ಬಿದ್ದಿದೆ.
Published on

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ನಿವಾಸಿ ಹುಕ್ರಪ್ಪ ಎಂಬುವರ ಮನೆ ಹಿಂಬದಿಯ ಗುಡ್ಡ ಗುರುವಾರ ಜರಿದು ಬಿದ್ದು ಮನೆಗೆ ಹಾನಿಯುಂಟಾಗಿದೆ. ಅದೃಷ್ಠವಶಾತ್ ಯಾವುದೇ ಜೀವಹಾನಿ ಸಂಭವಿಸಲಿಲ್ಲ.

ಘಟನಾ ಸ್ಥಳಕ್ಕೆ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿದ್ದ ಗುಡ್ಡದ ಮಣ್ಣು ತೆರವು ಕಾರ್ಯಾಚರಣೆಗೆ 25 ಸಾವಿರ ರೂ.ಗೂ ಅಧಿಕ ಮೊತ್ತ ಬೇಕಾಗಿದ್ದು, ಕಂದಾಯ ಇಲಾಖೆ ಪ್ರಾಕೃತಿಕ ವಿಕೋಪ ಪರಿಹಾರದಡಿ ಆರ್ಥಿಕ ಸಹಕಾರ ನೀಡಬೇಕೆಂದು ಸ್ಥಳೀಯ ಸಾಮಾಜಿಕ ಮುಂದಾಳು ಮಹಮ್ಮದ್ ಬಂದಾರು ಅಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net