ಜನ ಸಾಮಾನ್ಯರು ಮೆಚ್ಚುವ ಪುಸ್ತಕ ಪ್ರಕೃತಿಯೇ ಮಹಾಮಾತೆ ಕೃತಿ ಬಿಡುಗಡೆಗೊಳಿಸಿ ಡಾ.ದೇವರಾಜ್ ಅಭಿಮತ

mng-june27-book release
Published on

ಮಂಗಳೂರು:‘ಪ್ರಕೃತಿಯೇ ಮಹಾಮಾತೆ’ ಜನ ಸಾಮಾನ್ಯರು, ಪ್ರಕೃತಿಯ ಕಾಳಜಿ ಇರುವವರು ಮೆಚ್ಚುವ ಕೃತಿಯಾಗಿದೆ. ಪರಿಸರಕ್ಕೆ ಸಂಬಂಧಿಸಿದ ಲೇಖನಗಳು ಇದರಲ್ಲಿವೆ ಎಂದು ಎಸ್‌ಡಿಎಂ ಪಿ.ಜಿ. ಸೆಂಟರ್‌ನ ನಿರ್ದೇಶಕ ಡಾ.ದೇವರಾಜ್ ಹೇಳಿದರು.


ನಗರದ ಪತ್ರಿಕಾ ಭವನದಲ್ಲಿ ಗುರುವಾರ ಅಮೃತ ಪ್ರಕಾಶ ಪತ್ರಿಕೆಯ ಸಾರಥ್ಯದಲ್ಲಿ ವಿಜಯಾ ಬ್ಯಾಂಕ್‌ನ ನಿವೃತ್ತ ಮುಖ್ಯ ಪ್ರಬಂಧಕ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ ಅವರ ‘ಪ್ರಕೃತಿಯೇ ಮಹಾಮಾತೆ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.


ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿಯವರು ಅಧ್ಯಯನ ಶೀಲರಾಗಿದ್ದು, ಗ್ರಂಥಾಲಯಗಳಿಗೆ ತೆರಳಿ ಹೆಚ್ಚಿನ ಓದುವಿಕೆಯನ್ನು ಮೈಗೂಡಿಸಿಕೊಂಡ ಕಾರಣದಿಂದ ಅವರು ಬ್ಯಾಂಕ್ ಅಧಿಕಾರಿಯಾಗಿದ್ದರೂ ಸಾಹಿತ್ಯ ರಚನೆಗೆ ಸಾಧ್ಯವಾಗಿದೆ ಎಂದರು.


ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಜೈರಾಜ್ ಬಿ.ರೈ, ಉದ್ಯಮಿ ಸದಾನಂದ ಉಪಾಧ್ಯಾಯ, ಕೃತಿಕಾರ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ, ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net