ಶಿರಸಿ-ಧರೆ ಕುಸಿದು ಮಣ್ಣಿನಡಿ ಸಿಲುಕಿದ ಮೂವರು

Land Slide at Sirsi
Published on

ಶಿರಸಿ: ಜೆಸಿಬಿ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಧರೆ ಜರಿದು ಮಣ್ಣಿನಡಿ ಸಿಲುಕಿದ್ದ ಮೂವರನ್ನು ಅಗ್ನಿಶಾಮಕ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ತಾಲೂಕಿನ ಇಸಳೂರು ಬಪ್ಪನಳ್ಳಿಯಲ್ಲಿ ಘಟನೆ ನಡೆದಿದ್ದು, ರಾಘವೇಂದ್ರ ಗೋಪಾಲ ನಾಯ್ಕ, ಹನುಮಂತ ರಾಜಪ್ಪ ಹರಿಜನ, ಇಮ್ರಾನ್ ಖಾನ್ ಎಂಬುವವರನ್ನು ರಕ್ಷಿಸಲಾಗಿದೆ.
ಸ್ಥಳೀಯ ರಮೇಶ ನಾಯ್ಕ ಎಂಬುವವರು ಕರೆ ಮಾಡಿ ವಿಷಯ ತಿಳಿಸಿದ್ದರು. ಅಗ್ನಿಶಾಮಕ ವಿನಾಯಕ ಗೌಡ ನೇತೃತ್ವದಲ್ಲಿ ಚಾಲಕರಾದ ರಮೇಶ ಜಂಬಗಿ, ಸಾತೀತಪ್ಪ, ಸಿಬ್ಬಂದಿ ದುಂಡಪ್ಪ, ಈರಣ್ಣ ಜುಬೇರ್ ಮುಲ್ಲಾ, ಕೃಷ್ಣ ನಾಯಿಕ, ತಂತ್ರಜ್ಞ ಪ್ರವೀಣ ಅವರು ಮೂವರನ್ನು ಹೊರ ತೆಗೆದು ಆಂಬುಲೆನ್ಸ್ನಲ್ಲಿ ಸಾಗಿಸಲಾಗಿದೆ ಎಂದು ಆಗ್ನಿಶಾಮಕ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net