ಭೂ ಸುರಕ್ಷಾ ಯೋಜನೆಯಿಂದ ದಾಖಲೆ ಭದ್ರ

Published on

ಸಿರಗುಪ್ಪ: ಹಳೇ ಭೂ ದಾಖಲೆಗಳನ್ನು ಸುರಕ್ಷಿತವಾಗಿ ದಾಖಲೀಕರಣ ಮಾಡುವುದು ಭೂ ಸುರಕ್ಷಾ ಯೋಜನೆಯ ಉದ್ದೇಶವಾಗಿದೆ ಎಂದು ತಹಸೀಲ್ದಾರ್ ಎಚ್.ವಿಶ್ವನಾಥ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭೂ ಸುರಕ್ಷಾ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾರ್ಚ್ 2024ರಲ್ಲಿ ಭೂ ಸುರಕ್ಷಾ ಯೋಜನೆ ಆರಂಭಿಸಿದ್ದು, ಪ್ರತಿ ಜಿಲ್ಲೆಯಿಂದ ಒಂದು ತಾಲೂಕನ್ನು ಆಯ್ಕೆ ಮಾಡಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿತ್ತು. ಜ.1 ರಿಂದ ರಾಜ್ಯಾದ್ಯಂತ ಭೂ ಸುರಕ್ಷಾ ಯೋಜನೆ ಅಧಿಕೃತವಾಗಿ ಜಾರಿ ಮಾಡಲಾಗಿದೆ. ಈ ಯೋಜನೆ ಅಡಿ ಕಂದಾಯ ಇಲಾಖೆಯ ಎ ಮತ್ತು ಬಿ ವರ್ಗದ ಕಡತಗಳನ್ನು ಗಣಕೀಕರಣ ಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಗಣೀಕರಣದಿಂದ ದಾಖಲೆ ಶಾಶ್ವತ, ಸುಲಭ ಲಭ್ಯತೆಯಾಗಲಿದೆ. ತಂತ್ರಜ್ಞಾನದಿಂದ ತಿದ್ದಲು, ಕಳೆಯಲು ಅಸಾಧ್ಯ. ಅಲ್ಲದೆ ಸರಳ ಆಡಳಿತಕ್ಕೆ ಅನುಕೂಲವಾಗಲಿದೆ. ತಾಲೂಕಿನಲ್ಲಿ 25 ಲಕ್ಷ ಪುಟಗಳ ಕಂದಾಯ ಕಡತಗಳ ಗಣಕೀಕರಣ ಕಾರ್ಯ ಆರಂಭಿಸಲಾಗಿದೆ ಎಂದರು.

ನಗರಸಭೆ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ಯಶೋದಾ ಮೂರ್ತಿ, ಗ್ರೇಡ್-2 ತಹಸೀಲ್ದಾರ್ ಸತ್ಯಮ್ಮ, ಸದಸ್ಯರಾದ ಎಚ್.ಗಣೇಶ್, ಮೋದಿನ್, ಜಾಜಿ ರಾಮಪ್ಪ, ಭೂನ್ಯಾಯ ಮಂಡಳಿಯ ಸದಸ್ಯ ಕೆ.ಶ್ರೀನಿವಾಸ್, ಅಪೂರ್ವ ನಟರಾಜ, ಮುರುಣಿ ಪವಿತ್ರಾ ಪಂಪಣ್ಣ, ಬಗರ ಹುಕುಂ ಸಮಿತಿ ಸದಸ್ಯರಾದ ಪವನ್ ಕುಮಾರ್ ದೇಸಾಯಿ, ಮೀನಾಕ್ಷಿ ನಾಗರಾಜ್, ರೇಷ್ಮಾ ಜಲಾಲಿ ಪೀರ, ಅಬ್ದುಲ್ ನಬಿ, ಉಮೇಶ್ ಗೌಡ, ಟಿ.ಸಿ.ಮೋಹನ ಭೈರಾಪುರ ಬಸನಗೌಡ ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net