

ಕೆಜಿಎಫ್: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಭೂ&ಸುರಕ್ಷಾ ಯೋಜನೆಯೂ ಒಂದಾಗಿದ್ದು, ಇದರಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ಹಳೇ ದಾಖಲೆಗಳು ಸಂರಕ್ಷಿಸಲ್ಪಟ್ಟು, ಸುಲಭವಾಗಿ ಸಾರ್ವಜನಿಕರ ಕೈ ತಲುಪಲಿವೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ತಾಲೂಕು ಕಚೇರಿಯಲ್ಲಿ ಬುಧವಾರ ಭೂ&ಸುರಕ್ಷಾ ಯೋಜನೆಯ ಡಿಜಿಟಲೀಕರಣ ಕೇಂದ್ರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನೂತನವಾಗಿ ಪ್ರಾರಂಭಿಸಲಾಗಿರುವ ಭೂ&ಸುರಕ್ಷಾ ಯೋಜನೆಯಿಂದ ತಾಲೂಕಿನ ಕ್ಯಾಸಂಬಳ್ಳಿ, ಬೇತಮಂಗಲ, ರಾರ್ಬಟ್ಸನ್ಪೇಟೆ ಹೋಬಳಿಗಳ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಿಸಿ ರಸಲಾಗುತ್ತಿದೆ ಎಂದರು.
ಭೂ&ದಾಖಲೆ ಡಿಜಿಟಲೀಕರಣದಿಂದ ಸ್ವಾತಂತ್ರ$್ಯ ಪೂರ್ವ ಮತ್ತು ನಂತರದ ಭೂ&ದಾಖಲೆ ಕೊಠಡಿಯಲ್ಲಿ ಜನರಿಗೆ ಲಭ್ಯವಾಗಲಿದ್ದು, ಎಂದಿಗೂ ಸಂರಕ್ಷಿಸಲ್ಪಡುವುದರಿಂದ ಅಗತ್ಯವಿದ್ದಾಗ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ ಎಂದರು.
ಭೂ ದಾಖಲೆಗಾಗಿ ಕಚೇರಿಗೆ ಅಲೆಯದೆ ನೇರವಾಗಿ ಜನರಿಗೆ ಸಿಗುತ್ತದೆ. ವಿನಾ@ಕಾರಣ ಕಚೇರಿಗೆ ಅಲೆಸುವುದನ್ನು ಅಧಿಕಾರಿಗಳು, ಸಿಬ್ಬಂದಿ ತಪ್ಪಿಸಿ, ಅಗತ್ಯ ಭೂ ದಾಖಲೆಗಳನ್ನು ಜನರಿಗೆ ವಿತರಣೆ ಮಾಡಬೇಕು ಎಂದರು.
ಶಿರಸ್ತೇದಾರ್ ಮಂಜುನಾಥ್, ಕಂದಾಯ ನಿರೀಕ್ಷಕ ಚಂದ್ರಮೋಹನ್, ಸಿಬ್ಬಂದಿ ಕಿರಣ್, ಸತ್ಯಮೂರ್ತಿ ಮುಖಂಡ ಒಬಿಸಿ
ಮುನಿಸ್ವಾಮಿ ಇತರರಿದ್ದರು.
ಹುಡುಕಾಟ ಸುಲಭ
ತಹಸೀಲ್ದಾರ್ ನಾಗವೇಣಿ ಮಾತನಾಡಿ, ಕಂದಾಯ ದಾಖಲೆಗಳ ಗಣಕೀಕರಣ ತಂತ್ರಾಂಶದಲ್ಲಿ ಕಡತ ಮತ್ತು ವಹಿಗಳ ಇಂಡೆಕ್ಸಿಂಗ್, ಕ್ಯಾಟಲಾಗಿಂಗ್, ಸ್ಕಾ$ನಿಂಗ್ ಮತ್ತು ಅಪ್ಲೋಡ್ ಮಾಡುವಂತಹ ಚಟುವಟಿಕೆ ಒಳಗೊಂಡಿರುತ್ತದೆ. ಕಚೇರಿ ಟಿಪ್ಪಣಿಗಳು, ಆದೇಶ, ಸುತ್ತೋಲೆ, ನಡಾವಳಿಗಳು ಸೇರಿ ವಿವಿಧ ದಾಖಲೆಗಳನ್ನು ಪ್ರತ್ಯೇಕವಾಗಿ ಸ್ಕಾ$ನ್ ಮಾಡಿ ಸೂಕ್ತ ಕೀವರ್ಡ್ಗಳೊಂದಿಗೆ ಟ್ಯಾಗ್ ಮಾಡಿ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ತಂತ್ರಾಂಶದಲ್ಲಿ ಕೀವರ್ಡ್ ಅಳವಡಿಸುವುದರಿಂದ ಸುಲಭವಾಗಿ ಹುಡುಕಬಹುದು ಎಂದರು.
ತಪ್ಪಲಿದೆ ಅಲೆದಾಟ
ಡಿಜಿಟಲೀಕರಣದಿಂದ ಅಭಿಲೇಖಾಲಯದ ಸಿಬ್ಬಂದಿಯನ್ನು ಸಂಪರ್ಕಿಸಿ ದಾಖಲೆಗಳನ್ನು ಪಡೆಯುವುದು ತಪು$್ಪತ್ತದೆ. ಅಲ್ಲದೇ ದಾಖಲೆಗಳ ವ್ಯತ್ಯಾಸ, ರೆಕಾರ್ಡ್ ಮಿಸ್ಸಿಂಗ್, ವಿಳಂಬ ಸೇರಿ ಎಲ್ಲ ಸಮಸ್ಯೆಗಳು ಪರಿಹಾರ ಆಗಲಿದ್ದು, ನಾಗರಿಕರು ದಾಖಲೆಗಳಿಗಾಗಿ ಕಚೇರಿಗೆ ಭೇಟಿ ನೀಡುವ ಬದಲು ಸಲಭವಾಗಿ ಆನ್ಲೈನ್ ಮೂಲಕ ಡೌನ್ಲೋಡ್ ಮಾಡಬಹುದು ಎಂದರು.
ನಕಲಿ ದಾಖಲೆ ಸೃಷ್ಟಿಗೆ ಕಡಿವಾಣ
ಶಿಥಿಲಗೊಂಡ ದಾಖಲೆಗಳನ್ನು ಶಾಶ್ವತ ಡಿಜಿಟಲ್ ರೂಪದಲ್ಲಿ ಉಳಿಸಿಕೊಳ್ಳಲು, ನಕಲಿ ದಾಖಲೆಗಳ ಸೃಷ್ಟಿ ತಡೆಗಟ್ಟಲು ಮತ್ತು ಆನ್ಲೈನ್ನಲ್ಲಿ ನಾಗರಿಕರಿಗೆ ಲಭ್ಯವಾಗುವಂತೆ ಭೂ&ಸುರಕ್ಷಾ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ಶಾಸಕಿ ರೂಪಕಲಾ ಹೇಳಿದರು. ರಾಜ್ಯದ ಕಂದಾಯ ಇಲಾಖೆ ಕೈಗೊಂಡಿರುವ ಈ ಯೋಜನೆಯಡಿ ತಾಲೂಕು ಕಚೇರಿಯ ಅಭಿಲೇಖಾಲಯಗಳಲ್ಲಿರುವ ಅತ್ಯಂತ ಪ್ರಮುಖ, ಹಳೇ ಮತ್ತು ಸ್ವಾತಂತ್ರ$್ಯ ಪೂರ್ವದ ಭೂ ದಾಖಲೆಗಳನ್ನು ಇಂಡೆಕ್ಸಿಂಗ್, ಕ್ಯಾಟಲಾಗಿಂಗ್, ಸ್ಕಾ$ನಿಂಗ್ ಮತ್ತು ಅಪ್ಲೋಡಿಂಗ್ ಮಾಡಿ ಗಣಕೀರಣಗೊಳಿಸಲಾಗುತ್ತಿದೆ ಎಂದರು.