ಭೂಮಿ ಇಲ್ಲದವರಿಗೆ ಹಕ್ಕು ಕೊಡಿಸಿದ ನಾಯಕ

NYAMATI ARASU
Published on

ನ್ಯಾಮತಿ: ದೇವರಾಜ ಅರಸು ಅವರ ಚಿಂತನೆಯಿಂದಾಗಿ ಉಳುವವನೆ ಭೂಮಿ ಒಡೆಯ ಎಂಬ ಕಾನೂನು ತಂದಿದ್ದರಿಂದ ಲಕ್ಷಾಂತರ ಜನರು ಭೂಮಿಯ ಒಡೆಯರಾಗಿದ್ದಾರೆಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಭಾನುವಾರ ಡಿ.ದೇವರಾಜ್ ಅರಸು ಅವರ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಅರಸು ಅವರ ದೂರದೃಷ್ಟಿ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು ಎಂದರು.

ಸವಳಂಗ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಎಚ್. ಬಸವರಾಜ್, ತಹಸೀಲ್ದಾರ್ ಗೋವಿಂದಪ್ಪ, ವಿದ್ಯಾರ್ಥಿ ನಿಲಯದ ಸೀಮಾ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣಾಧಿಕಾರಿ ಟಿ.ಎಂ. ಮೃತ್ಯುಂಜಯ, ತಾಪಂ ಇಒ ಕೆ.ಟಿ. ಕರಿಬಸಪ್ಪ, ಎ.ಎಸ್.ಐ. ಚಂದ್ರು, ಜಿ. ಲೋಕಪ್ಪ, ಹೊಸಮನೆ ಕುಂಬಾರ ಮಲ್ಲಿಕಾರ್ಜುನಪ್ಪ, ಎಂ. ಕರಿಬಸಪ್ಪ, ಷಣ್ಮುಖಪ್ಪ, ಡಿ.ಎಂ. ವಿಜೇಂದ್ರ ಮಹೇಂದ್ರಕರ್ ಇತರರು ಇದ್ದರು.

ಪಲ್ಲವಿ, ಯಶಸ್ವಿನಿ ಪ್ರಾರ್ಥಿಸಿದರು, ಗಣೇಶ್ ಕೆ.ಜಿ. ನಿರೂಪಿಸಿದರು, ಗೋವಿಂದಪ್ಪ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net