ಜಮೀನು ವಿವಾದದಿಂದ ಎರಡು ಗುಂಪುಗಳ ನಡುವೆ ಗಲಾಟೆ

04HDK0005
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38;
Published on

ಎಚ್.ಡಿ.ಕೋಟೆ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಬುಧವಾರ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಎದುರು ಎರಡು ಗುಂಪುಗಳು ನಡುವೆ ಗಲಾಟೆ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.


ಕೆ.ಎಡತೊರೆ ಗ್ರಾಮದ ಸರ್ವೇ ನಂ 31/2 ರಲ್ಲಿರುವ 5 ಎಕರೆ ಜಮೀನು ತಮಗೆ ಸರ್ಕಾರದಿಂದ ಮಂಜೂರು ಆಗಿದೆ ಎಂದು ತಾಲೂಕಿನ ಕೆ.ಎಡತೊರೆ ಗ್ರಾಮದ ಮುಸ್ಲಿಂ ಸಮುದಾಯದ ಒಂದು ಗುಂಪಿನವರು ವಾದಿಸುತ್ತಿದ್ದರು. ಮತ್ತೊಂದು ಮುಸ್ಲಿಂ ಸಮುದಾಯದ ಗುಂಪು ಆ ಜಮೀನು ನಮಗೆ ಸೇರಿದ್ದು ಎಂದು ಪ್ರತಿವಾದ ಮಾಡುತ್ತಿತ್ತು. ಈ ವೇಳೆ ಗಲಾಟೆ ನಡೆದಿದೆ.


ಜಮೀನು ವಿಚಾರ ಹುಣಸೂರು ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು ಈ ಜಮೀನಿಗೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗೆ ಸೂಕ್ತ ವರದಿ ನೀಡುವಂತೆ ತಹಸೀಲ್ದಾರ್‌ಗೆ ಸೂಚಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಒಂದು ಗುಂಪಿನ ಪರವಾಗಿ ವರದಿ ಮಾಡಿದ್ದಾರೆ ಎಂದು ಮತ್ತೊಂದು ಗುಂಪಿನವರು ಆರೋಪಿಸಿ ತಹಸೀಲ್ದಾರ್‌ಗೆ ದೂರು ನೀಡಿದ್ದರು. ನಂತರ ತಹಸೀಲ್ದಾರ್ ಮಂಗಳವಾರ ಮತ್ತೆ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಕಂದಾಯ ಅಧಿಕಾರಿ ಹಾಗೂ ಸರ್ವೇ ಇಲಾಖೆಗೆ ಆದೇಶಿಸಿದ್ದರು. ತಹಸೀಲ್ದಾರ್ ಆದೇಶದಂತೆ ಮಂಗಳವಾರ ಕಂದಾಯ ಅಧಿಕಾರಿ ಹಾಗೂ ಸರ್ವೇ ಇಲಾಖೆಯವರು ವರದಿ ಮಾಡಿಕೊಂಡು ಬಂದಿದ್ದರು. ಇನ್ನೊಂದು ಗುಂಪು ಮೊದಲು ವರದಿ ಮಾಡಿ ಮತ್ತೆ ಜಮೀನಿಗೆ ಹೋಗಿ ವರದಿ ಮಾಡಿದ್ದಾರೆ ಎಂದು ಆರೋಪಿಸಿತು.


ಈ ವೇಳೆ ಕಾರ್ಯನಿಮಿತ್ತ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಎರಡು ಗುಂಪುಗಳು ನಮಗೆ ಅನ್ಯಾಯ ಆಗಿದೆ ಎಂದು ಶಾಸಕರಲ್ಲಿ ಅವಲತ್ತುಕೊಂಡರು. ನಂತರ ಶಾಸಕರು ಎರಡು ಗುಂಪಿನವರ ವಾದ ಆಲಿಸಿ, ತಹಸೀಲ್ದಾರ್ ಶ್ರೀನಿವಾಸ್ ಅವರಿಂದ ಮಾಹಿತಿ ಪಡೆದರು. ಎರಡು ಕಡೆಯವರಿಗೂ ಅನ್ಯಾಯ ಆಗದಂತೆ ನ್ಯಾಯ ದೊರಕಿಸಿಕೊಡುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net