ಕಲಾ ಸ್ಪರ್ಧೆ, ಕಲಾ ಪ್ರದರ್ಶನಕ್ಕೆ ಅರ್ಜಿ ಆಹ್ವಾನ

kannada and culture dept
Published on

ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯು 52ನೇ ವಾರ್ಷಿಕ ಕಲಾ ಸ್ಪರ್ಧೆ ಹಾಗೂ ಕಲಾ ಪ್ರದರ್ಶನಕ್ಕೆ ಚಿತ್ರ ಕಲಾವಿದರಿಂದ ಅರ್ಜಿ ಆಹ್ವಾನಿಸಿದೆ. ವರ್ಣಚಿತ್ರ, ಸಾಂಪ್ರದಾಯಿಕ, ಮುದ್ರಣ ಕಲೆ, ರೇಖಾಚಿತ್ರ, ಪ್ರತಿಷ್ಠಾಪನಾ ಕಲೆ ಹಾಗೂ ಛಾಯಾಚಿತ್ರಗಳ ಸ್ಪರ್ಧೆಯಲ್ಲಿ ತೀರ್ಪುಗಾರರು ಆಯ್ಕೆ ಮಾಡಿದ 10 ಕಲಾಕೃತಿಗಳ ಕಲಾವಿದರಿಗೆ ತಲಾ 25 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ನೀಡಲಾಗುತ್ತದೆ.

ಪ್ರವೇಶ ಶುಲ್ಕ 300 ರೂ. ನಗದು ಅಥವಾ ಡಿಡಿ ಮೂಲಕ ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಪಾವತಿಸಬೇಕು. ಭರ್ತಿ ಮಾಡಿದ ಅರ್ಜಿ ನಮೂನೆಯ ಜತೆಗೆ ಕಲಾಕೃತಿಯ ಛಾಯಾಚಿತ್ರ ಹಾಗೂ ದಾಖಲಾತಿಗಳನ್ನು ಸೆ. 21ರ ಒಳಗೆ ಇ-ಮೇಲ್ www.lalitkala.karnataka.gov.in ಮೂಲಕ ಕಳುಹಿಸಬೇಕು. ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು- 2 ಈ ವಿಳಾಸಕ್ಕೆ ನೇರವಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು. ಲಕೋಟೆಯ ಮೇಲೆ 52ನೇ ವಾರ್ಷಿಕ ಕಲಾಪ್ರದರ್ಶನಕ್ಕಾಗಿ ಅರ್ಜಿ ಎಂದು ಸಮೂದಿಸಿರಬೇಕು. ವಿವರಕ್ಕೆ ದೂ: 080- 2248 0297 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net