

ಬೆಂಗಳೂರು: ಸ್ವಾತಂತ್ರೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ನಡೆಯಲಿರುವ 216ನೇ ಲಪುಷ್ಪ ಪ್ರದರ್ಶನಕ್ಕೆ ದಿನಾಂಕ (ಆ. 8 ರಿಂದ 19ರವರೆಗೆ) ನಿಗದಿಯಾಗಿದ್ದು, ಪ್ರದರ್ಶನ ಸಂಬಂಧ ನಡೆಯಲಿರುವ ನಾನಾ ತೋಟಗಾರಿಕೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಬಾರಿಯ ಪ್ರದರ್ಶನದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಆಂಬೇಡ್ಕರ್ ಅವರ ಜೀವನಗಾಥೆ ಲಪುಷ್ಪಗಳಲ್ಲಿ ಅನಾವರಣಗೊಳ್ಳಲಿದ್ದು, ಜೊತೆಗೆ ಹಲವು ಆಕರ್ಷಣೆಗಳು ಪ್ರದರ್ಶನದಲ್ಲಿ ಇರಲಿವೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಕುಸುಮಾ ತಿಳಿಸಿದ್ದಾರೆ.
ಪ್ರದರ್ಶನದ ಪ್ರಯುಕ್ತ ಸರಕಾರಿ/ಖಾಸಗಿ ಅಲಂಕಾರಿಕ ತೋಟಗಾರಿಕಾ ಆಸಕ್ತರಿಗಾಗಿ ಮನೆ, ಕಚೇರಿ ಅಥವಾ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಲಂಕಾರಿಕ ತೋಟಗಳು, ತಾರಸಿ/ಕೈ ತೋಟಗಳು, ತರಕಾರಿ/ಔಷಧಿ ಗಿಡಗಳು, ಕುಂಡದಲ್ಲಿ ಬೆಳೆದ ನಾನಾ ಜಾತಿಯ ಗಿಡಗಳು, ಇಕೆಬಾನ ಜಾನೂರ, ಥಾಯ್ ಆರ್ಟ್ ಮತ್ತು ಇತರೆ ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರದರ್ಶಕರು ಕಚೇರಿ ವೇಳೆಯಲ್ಲಿ ಬೆಳಗ್ಗೆ 10 ರಿಂದ 5ರವರೆಗೆ ಜು.22 ರಿಂದ 31ರವರೆಗೆ ಮೊ: 78926 55167, 99164 33061 ಹಾಗೂ ಇಲಾಖಾ ಮಳಿಗೆಗಳ ಹಂಚಿಕೆಗೆ ಅರ್ಜಿ ಸಲ್ಲಿಸುವವರು ಜು.15ರಿಂದ 23ರವರೆಗೆ ಮೊ: 90080 94261, 99864 28313 ಸಂಪರ್ಕಿಸಬಹುದಾಗಿದೆ.