ಗೋಪಾಲಕೃಷ್ಣ ಮಂದಿರದಲ್ಲಿ ಲಕ್ಷ ತುಳಸಿ ಅರ್ಚನೆ

29 ylp news 01 (ekadashi)
Published on

ಯಲ್ಲಾಪುರ: ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗುರುವಾರ ಆಶಾಢ ಏಕಾದಶಿ ಪ್ರಯುಕ್ತ ಪ್ರತಿ ವರ್ಷದಂತೆ ಲಕ್ಷ ತುಳಸಿ ಅರ್ಚನೆ ನಡೆಯಿತು
ದೇವಸ್ಥಾನದ ಪುರೋಹಿತ ಡಾ. ಶಂಕರ ಭಟ್ಟ ಬಾಲೀಗದ್ದೆ ಅವರ ಮಾರ್ಗದರ್ಶನದಲ್ಲಿ ನೂರಾರು ಭಕ್ತರು ಕೃಷ್ಣನಿಗೆ ತುಳಸಿ ಅರ್ಚನೆ ನೆರವೇರಿಸಿದರು.

ವಿಷ್ಣು ಸಹಸ್ರನಾಮ, ಅಷ್ಟೋತ್ತರ, ಗೋಪಾಲಕೃಷ್ಣ ಅಷ್ಟೋತ್ತರದ ಮೂಲಕ ಅರ್ಚಿಸಲಾಯಿತು.


ಈ ವೇಳೆ ಮಾತನಾಡಿದ ಪುರೋಹಿತ ಡಾ. ಶಂಕರ ಭಟ್ಟ ಬಾಲೀಗದ್ದರ, ಮಹಾವಿಷ್ಣುವಿನ ಶಯನೋತ್ಸವದ ಪುಣ್ಯ ಕಾಲದಲ್ಲಿ ವಿಷ್ಣುವಿನ ಆರಾಧನೆಯ ಮೂಲಕ ಕೃತಾರ್ಥತೆ ಪಡೆಯಬೇಕೆಂದರು.


ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ಭಟ್ಟ ಬಿದ್ರೆಪಾಲ, ಉಪಾಧ್ಯಕ್ಷ ಸುಹಾಸ ಭಾಗ್ವತ, ಕಾರ್ಯದರ್ಶಿ ಮಹಾಬಲೇಶ್ವರ ಭಾಗ್ವತ ಗುಡ್ನಮನೆ, ಮೊಕ್ತೇಸರ ಗೋಪಾಲಕೃಷ್ಣ ಭಟ್ಟ ವೈದಿಕರಮನೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net