ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ

Oplus_16908288
Oplus_16908288
Published on

ಹಿರೇಬಾಗೇವಾಡಿ: ಕೆರೆಗಳ ಪುನಶ್ಚೇತನದಿಂದ ಸಾರ್ವಜನಿಕರಿಗೆ ನೀರಿನ ಕೊರತೆ ನೀಗಿಸುವುದರೊಂದಿಗೆ ಅಂತರ್ಜಲ ಮಟ್ಟವನ್ನೂ ಹೆಚ್ಚಿಸಬಹುದಾಗಿದೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.

ಸಮೀಪದ ಕುಕಡೊಳ್ಳಿ ಗ್ರಾಮದಲ್ಲಿ ಶನಿವಾರ ಶ್ರೀ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಬಿ.ಸಿ. ಟ್ರಸ್ಟ್​ ಹಿರೇಬಾಗೇವಾಡಿ ವತಿಯಿಂದ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಅನುದಾನದಡಿ ಪುನಶ್ಚೇತನಗೊಳಿಸಲಾದ ಕೆರೆ ಹಸ್ತಾಂತರ ಮತ್ತು ನಾಮಲಕ ಅನಾವರಣಗೊಳಿಸಿ ಅವರು ಮಾತನಾಡಿದರು.

ಗ್ರಾಮಾಭಿವದ್ಧಿ ಯೋಜನೆ ವತಿಯಿಂದ ಸರ್ಕಾರದಿಂದಲೂ ಆಗಲಾರದಂಥ ಕಾಮಗಾರಿಗಳನ್ನು ಕೆಲವೇ ಪ್ರಮಾಣದ ಅನುದಾನದಲ್ಲಿ ನಿಸ್ವಾರ್ಥವಾಗಿ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಅದು ಯೋಜನೆಯ ಶಿಸ್ತು ಮತ್ತು ಪ್ರಾಮಾಣಿಕತೆ ಎತ್ತಿ ತೋರಿಸುತ್ತದೆ ಎಂದರು.

ಜಗದೀಶ ಶೆಟ್ಟರ ಅವರು ಗ್ರಾಪಂ ಅಧ್ಯೆ ಸಿದ್ದವ್ವ ಹೊಸೂರಗೆ ಕೆರೆ ಹಸ್ತಾಂತರಿಸಿದರು. ಪ್ರಾದೇಶಿಕ ನಿದೆೇರ್ಶಕಿ ದಯಾಶೀಲ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ ವಿವಿಧ ಜನಪರ ಕಾಮಗಾರಿಗಳ ಕುರಿತು ಮಾತನಾಡಿದರು.

ಅಭಿನವ ಚನ್ನಮಲ್ಲಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಪ್ರಾದೇಶಿಕ ನಿದೆೇರ್ಶಕಿ ದಯಾಶೀಲ, ಕಾನೂನು ಸಲಹೆಗಾರ ಜಿ.ಆರ್​. ಸೋನೇರ, ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ, ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿ ಮುಖಂಡ ಧನಂಜಯ ಜಾಧವ, ಉದ್ಯಮಿ ಚೇತನ ಅಂಗಡಿ, ಯೋಜನಾಧಿಕಾರಿ ಲೋಕೇಶ, ಗ್ರಾಪಂ ಸದಸ್ಯರು, ಗ್ರಾಮಸ್ಥರು, ಒಕ್ಕೂಟದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net