ಕೆರೆಯಲ್ಲಿ ಕಾಲು ಜಾರಿ ಬಿದ್ದ ಸಾವು

river water
Published on

ಮಾನ್ವಿ: ತಾಲೂಕಿನ ಪೆಸಲಂಬಡಾ ಕ್ಯಾಂಪ್‌ನ ಪ್ರಸಾದ್ ಅವರ ಹೊಲದ ಕೆರೆಯಲ್ಲಿ ನೀರು ಕುಡಿಯಲು ಹೋದ ಯುವತಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.

ಲಕ್ಷ್ಮೀ(19) ಮತ್ತು ರೇಣುಕಾ (14) ಇಬ್ಬರೂ ಕುರಿ ಮೇಯಿಸಲು ಹೋದಾಗ ನೀರಿನ ದಣಿವು ನಿವಾರಣೆಗೆ ಕೆರೆಗೆ ತೆರಳಿದ್ದ ಲಕ್ಷ್ಮೀ ಕಾಲು ಜಾರಿ ಬಿದ್ದಿದ್ದಾಳೆ. ಅಕೆಯನ್ನು ರಕ್ಷಿಸಲು ಹೋದ ರೇಣುಕಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net